ಇತ್ತೀಚೆಗೆ ___LINK_OPEN_href="http://www.pbs.org/" target="_blank"___ಪಿ.ಬಿ.ಎಸ್ ದಲ್ಲಿ ಮೈಕಲ್ ವುಡ್ ಎಂಬಾತನ ’The Story of India' ಎನ್ನುವ ಸಾಕ್ಷ್ಯ ಚಿತ್ರ ಪ್ರಸಾರವಾಯಿತು.

ಒಂದು ಗಂಟೆಯ ಆರು ಪ್ರಕರಣಗಳಲ್ಲಿ, ಭಾರತದ ೬೦೦೦ ವರ್ಷಗಳ ಚರಿತ್ರೆಯನ್ನು ತೋರಿಸುವ ಪ್ರಯತ್ನ ಇದಾಗಿತ್ತು. ಇಂಟರ್ನೆಟ್ ನಲ್ಲಿ ಈ ಪುಸ್ತದ ಮೇಲೆ, ಚಿತ್ರದ ಬಗ್ಗೆ ಒಳ್ಳೇ ಅಭಿಪ್ರಾಯಗಳನ್ನು ಓದಿದ್ದ ನಾನು ಇದನ್ನು ನೋಡಲು ಕಾತುರನಾಗಿದ್ದಂತೂ ಹೌದು.

ಆದರೆ, ನೋಡಿದ ಮೇಲೆ ನಿರಾಸೆಯಾಗಿದ್ದಂತೂ ನಿಜ.

ಹಿಂದೆ ಇರುತ್ತಿದ್ದಿದ್ದಕ್ಕಿಂತ ಸ್ವಲ್ವ ದನಿಯ ಬದಲಾವಣೆ ಇರುವುದಾದರೂ (ಉದಾಹರಣೆಗೆ ವಿಜ್ಞಾನಕ್ಕೆ ಭಾರತದ ಕೊಡುಗೆ ಗಳನ್ನು ಗುರುತಿಸಿರುವುದು), ಇಂತಹ ಮಟ್ಟದಲ್ಲಿ ತೆಗೆಯಬೇಕಾದ ಚಿತ್ರವೊಂದರಲ್ಲಿ ಇರಬಾರದಷ್ಟು ತಪ್ಪುಗಳು ತುಂಬಿವೆ.

ಮೇಲುನೋಟಕ್ಕೇ ಕಂಡ ಕೆಲವನ್ನು ನನ್ನ ಇಂಗ್ಲಿಷ್ ಬ್ಲಾಗಿನಲ್ಲಿ ಹಾಕಿರುವೆ - ಆಸಕ್ತರಿಗೆ ಕೊಂಡಿ ಇಲ್ಲಿದೆ:

 

___LINK_OPEN_href="http://neelanjana.wordpress.com/2009/01/22/whats-wrong-with-michael-woods-story-of-india/" target="_blank" title="The Story of India"___What's Wrong With Michael Wood's 'The Story of India'

 

-ಹಂಸಾನಂದಿ