ಹಿಂದೆ ದ್ರೌಪದಿಯ ಮಾನವನ್ನುಳಿಸಲು ಅವತರಿಸಿದಂತೆ
ವಿಚಾರವಾದಿಗಳೆಂದು ಬೀಗುತ್ತಿರುವ, ಆಷಾಡಭೂತಿತನದಿಂದ
ಮೆರೆಯುತ್ತಿರುವ ಗಂಡಸರಿಂದ ನಮ್ಮನ್ನು ರಕ್ಷಿಸು!
ನಮ್ಮ ಸ್ವಾತಂತ್ರ್ಯದಿಂದ ದೇಶ ಹಾಳಾಯಿತೆಂದು
ಕೂಗಾಡುತ್ತಿರುವ ಬಾಯಿಗಳಿಂದ ನಮ್ಮನ್ನು ರಕ್ಷಿಸು!
ಮತ್ತೆ ನಮ್ಮನ್ನು ಗುಲಾಮರನ್ನಾಗಿ ಮಾಡಬೇಕೆಂದು
ಆಶಯ ಹೊಂದಿರುವ ಹಸ್ತಗಳಿಂದ ರಕ್ಷಿಸು!
ನಿನ್ನ ನಾಮಸ್ಮರಣೆಯ ಹೆಸರಿನಲ್ಲಿ, ತಮ್ಮ ಸ್ವಾರ್ಥದ
ಬೇಳೆ ಬೇಯಿಸಿಕೊಳ್ಳುತ್ತಿರುವ ಅಜ್ನಾನಿಗಳಿಂದ ರಕ್ಷಿಸು!
ದೇವ ದರುಶನವ ತೋರೆಯಾ!!
ಪ್ರತಿಕ್ರಿಯೆ (2)