ಹೇಳು ನಿನಗೇಕೆ ನನ್ನ ತೋಳ್ಬಂದಿಯಾಗಿಸುವಾಸೆ
ನನಗೋ ನಿಜವಾಗಿ ನಿನ್ನ ಮನದನ್ನೆಯಾಗುವಾಸೆ

ದೇಹದಾಸೆಯ ಬಿಟ್ಟು ನೀ ನನ್ನ ಮನದಾಸೆಯನರಿ
ದೇಹಕ್ಕೆ ದೇಹ ತಗುಲಿಸಿ ಆಗಲಾರೆ ಹರಕೆಯ ಕುರಿ

ನಿನ್ನಾಸೆ ತೀರಿಸಿಕೊಂಡು ಮೈಕೊಡವಿ ಎದ್ದು ಬಿಡುವೆ
ನಡುನೀರಿನಲಿ ಕೈ ಬಿಟ್ಟು ನೀ ನನ್ನ ಮರೆತು ಬಿಡುವೆ

ಹೃದಯಕ್ಕೆ ಹೃದಯವನು ಕೊಟ್ಟು ಪ್ರೀತಿಸು ನೀ ನನ್ನ
ನೋಡು ಆ ಮೇಲೆ ಎಂದಿಗೂ ಬಿಡಲಾರೆನು ನಾ ನಿನ್ನ
********************************