ನನಗೇ ತಿಳಿದಿರಲಿಲ್ಲ
ನನ್ನೊಳಗೊಬ್ಬ ಕವಿಯಿದ್ದಾನೆಂದು
ನಿಂತರೂ ಬಿಡುವುದಿಲ್ಲ
ಕುಳ್ತರೂ ಬಿಡುವುದಿಲ್ಲ
ಎದ್ದರೂ ಬಿಡುವುದಿಲ್ಲ
ಬಿದ್ದರೂ ಬಿಡುವುದಿಲ್ಲ
ಬಂದೂ ಬಂದೂ ಕಾಡುತ್ತಾನೆ
ನನ್ನೆಲ್ಲಾ ಭಾವನೆಗಳನ್ನು
ಹೊರಹಾಕುವವರೆಗೂ...
ಸಂಕಟದಲ್ಲಿ ಸಿಕ್ಕಿಸುತ್ತಾನೆ
ಉಸಿರು ನಿಲ್ಲುವಂತೆ ಮಾಡುತ್ತಾನೆ
ಮನದ ತುಡಿತಗಳನ್ನೆಲ್ಲಾ
ಒಂದೊಂದಾಗಿ ಬಿಚ್ಚಿಟ್ಟಾಗ
ನಿರಾಳತೆಯಿಂದ ಉಸಿರೆಳೆಯುತ್ತಿದ್ದಾಗ
ಮತ್ತೆ ಮತ್ತೆ ಇಣುಕಿ ನೋಡುತ್ತಾನೆ
ನಾನಿಲ್ಲೇ ಇರುವೆನೆಂದು
ನಿನ್ನೊಳಗೊಬ್ಬ ಕವಿ ಯಿರುವೆನೆಂದು
ಸೀತ ಆರ್. ಮೊರಬ್
ಪ್ರತಿಕ್ರಿಯೆ (1)