ಇಂದು ಅದೇಕೋ ಆಕೆ ಇಲ್ಲಿ ನನ್ನ ಜೊತೆಗಿಲ್ಲ
ಅದಕೇ ನೋಡಿ ನನಗೀಗ ನೆಮ್ಮದಿಯೇ ಇಲ್ಲ
ವಾರಾಂತ್ಯದಲ್ಲಿ ನನ್ನ ಜೊತೆಜೊತೆಗೆ ಇದ್ದವಳು
ಇಂದು ನನ್ನೊಂದಿಗೆ ಬಾರದೇ ಉಳಿದಳವಳು
ಅವಳ ನನ್ನ ನಂಟು ಈಗ ಎರಡು ವರುಷಗಳಷ್ಟು
ಅವಳ ನನ್ನ ಸಖ್ಯ ಎಂದಿಗೂ ಬಿಟ್ಟಿರಲಾರದಷ್ಟು
ಚಿಕ್ಕವರ ನಾ ನಿರ್ಲಕ್ಷಿಸಿದಷ್ಟೂ ಕಡಿಮೆ ನನ್ನ ಕಷ್ಟ
ದೊಡ್ಡವರತ್ತ ಗಮನ ಹರಿಸುವುದು ಇಂದು ನನಗಿಷ್ಟ
ಅವಳಿಲ್ಲದ ಕೊರತೆ ಅರಿವಾಗುತಿದೆ ನನಗೆ ಸ್ಪಷ್ಟ
ಅವಳಿಲ್ಲದೆ ನನ್ನ ಮನಸ್ಸಿಗೆ ಇಂದೆಲ್ಲವೂ ಅಸ್ಪಷ್ಟ
ನನ್ನ ಮಾತಿನರ್ಥವ ಅರಿತಿರಾ ಓದುಗರೇ ಹೇಳಿ
ಅವಳಾರೆಂದು ನೋಡೋಣ ನೀವೇ ಬಿಡಿಸಿ ಹೇಳಿ
***************************
ಪ್ರತಿಕ್ರಿಯೆ (8)