ಹುಡುಗರಾ ನೀವು ಸಿಕ್ಕಾಗ ದಾರಿಯಲಿ
ತಾಯಿ ಇದ್ದರೆ ನಮ್ಮೊಡನಲಿ
ನಗದಿದ್ದರೂ ,ಮಾತ ಆಡುತ್ತೇವೆ ಮನಸಿನಲಿ

ಮೆಚ್ಚುಗೆ ಕಾಣಬಯಸುತ್ತೇವೆ ನಿಮ್ಮ ಕಣ್ಣಲ್ಲಿ
ಕಂಡರೆ ಸಂತಸ ಮನದೂರಿನಲ್ಲಿ
ಬೀಳದಿದ್ದರೂ ಸರಿ ಪ್ರೀತಿ ಬಲೆಯಲಿ

ನಾವೇನು ಸ್ಥಿತ ಮನದವರಲ್ಲ್ಲ,
ನಿಮ್ಮನ್ನು ಕಂಡೂ ಕಾಣದ ಹಾಗೆ ದೂರವಿರಲು
ನಾವೇನು ಸನ್ಯಾಸಿನಿಯರಲ್ಲ ,
ನಿಮ ಪ್ರೀತಿ ಹಾಡಿಗೆ ಪ್ರತಿಯಾಗಿ ಹಾಡದಿರಲು

ನಟಿಸುತ್ತೇವೆ ನಾವು ಕುರಡಿಯರಂತೆ
ಕಾಣದ ಹಾಗೆ ನಿಮ್ಮನ್ನು ನಿಮ್ಮ ಆಸೆಯನ್ನು
ನಟಿಸುತ್ತೇವೆ ನಾವು ಕಿವುಡಿಯರಂತೆ
ಕೇಳದ ಹಾಗೆ ನಿಮ್ಮ ಹಾಡನ್ನು, ಪ್ರೀತಿ ಮಾತನ್ನು

(ಮುಂದುವರಿಯುವುದು)