ಆಗಸದಲ್ಲಿ ಮೋಡ ಮುಚ್ಚಿತ್ತು !!!
ನನ್ನ ಕಣ್ಗಳು ಕಂಬನಿಯಿಂದ ಮಂಜಾಗಿತ್ತು.
ಮನಸಿನ ಭಾವಕ್ಕೆ ಬಾನು ಕನ್ನಡಿ ಹಿಡಿದಂತಿತ್ತು.

ಮಳೆ ಜೊತೆ ಕಣ್ಣೀರು ಕೂಡ ಧಾರೆಯಾಗಿ ಹರಿದಿತ್ತು.
ಮೋಡಕ್ಕೂ ದುಃಖ ಆಗಿತ್ತೇನೋ ?? ಅಥವಾ ನನ್ನ ಕಣ್ಣೀರಿಗೆ ಉತ್ತರವಾಗಿತ್ತೋ ??

ಮನಸ್ಸಿನ ಪುಟಗಳಲ್ಲಿ ನಿನ್ನ ನೆನಪುಗಳನ್ನು ಮೆಲುಕುಹಾಕುತ್ತಿದ್ದೆ. ದುಃಖ ಮತ್ತೆ ಮತ್ತೆ ಒತ್ತರಿಸಿ ಬಂದಿತ್ತು.

ನನ್ನ ಪ್ರೀತಿಯಾಳನ ಹೇಗೆ ಅಳೆದು ತೋರಿಸಲಿ ನಿನಗೆ ??
ಆಕಾಶ ನೋಡು ಎಷ್ಟು ವಿಶಾಲವಾಗಿದೆ !!! ನನ್ನ ಪ್ರೀತಿನೂ ಕೂಡ ಅಷ್ಟೇ ಅನಂತವಾಗಿದೆ.
ನಿನಗೆ ಇದನ್ನ ಹೇಗೆ ತಿಳಿಹೇಳಲಿ???
ನಿನಗೇನು ತಿಳಿಯದೇ ಇಲ್ಲ. ಆದರೂ ಮೌನವಾಗಿದ್ದೀಯ......

ನನ್ನ ಪ್ರೀತಿಯ ಚಿನ್ನದ ಕೋಳ ಹಾಕಿ ನಾ ನಿನ್ನ ಬಂಧಿಸಲಾರೆ. ನನ್ನ ಅಸಹಾಯಕತೆನ ಆಯುಧವಾಗಿಟ್ಟುಕೊಂಡು ನಿನ್ನನ್ನು ಕಟ್ಟಿಹಾಕುವುದು ನನಗೆ ಇಷ್ಟ ಇಲ್ಲ... ನಿನ್ನ ಸುಖ, ನಿನ್ನ ಸಂತೋಷ ಅಷ್ಟೇ ನನಗೆ ಮುಖ್ಯ.

ನನ್ನಾಶಯ ಇಷ್ಟೇ...
ನನ್ನ ಕಣ್ಣೀರು ನಿನಗೆ ರಕ್ಷೆಯಾಗಲಿ....
ನನ್ನ ಪ್ರೀತಿ ನಿನ್ನ ಸದಾ ಕಾಯಲಿ ....

ಆದರೆ ಕಡೆಯದಾಗಿ ಒಂದೇ ಒಂದು ಮಾತು...ನನ್ನ ಬದುಕಿನುದ್ದಕ್ಕೂ ನಿನ್ನ ಸವಿನೆನಪಿನೊಂದಿಗೆ ಜೀವನಸಗಿಸುತ್ತೇನೆ.

ಗೆಳೆಯ ನಿನಗೆ ಅಂತಿಮ ವಿದಾಯ !!!

ಒಹ್ !!!

ಮರೆತಿದ್ದೆ. ಇನ್ನೊಂದು ಮಾತು ....

ಸಿಕ್ಕಾರು ನಿನ್ನಂಥವರು ಸಾವಿರಾರು
ಆದರೂ ಅವರೆಲ್ಲರೂ ನೀನಾಗಬಲ್ಲರೇನು !!!
ಬದುಕೇನು ನೀನಿಲ್ಲದೆಯೂ ನಾನು
ಆದರು ಆ ಬದುಕೊಂದು ಬದುಕೇನು ???