ಏನ ಹೇಳಲಿ ನಾ ಪಾಕಿಸ್ತಾನದ ಇಂದಿನ ಅವಸ್ಥೆಯ ಕಂಡು
ಬೆಳಗಾದರೆ ಕೊಲ್ಲುತ್ತಾರಲ್ಲಿ ಅಮಾಯಕರ ಹೊಡೆದು ಗುಂಡು
ಪ್ರಜೆ ಯಾರು ಯಾರ ಸರ್ಕಾರ ಎಂಬುದರ ಅರಿವಾಗುವುದಿಲ್ಲ
ಸೈನಿಕ-ಉಗ್ರವಾದಿಗಳ ನಡುವೆ ಅಂತರವೇ ಕಾಣ ಬರುವುದಿಲ್ಲ
ಅಲ್ಲಿನ ಸರ್ಕಾರ ಉಗ್ರವಾದಿಗಳ ಕೈಗೊಂಬೆ ಆಗಿ ಹೋಗಿದೆ
ತಮ್ಮ ಸರ್ಕಾರವನು ಉಳಿಸಿಕೊಳ್ಳುವುದೇ ಸಮಸ್ಯೆಯಾಗಿದೆ
ಮುಂಜಾವಿನಲಿ ಸೈನಿಕನಾಗಿದ್ದವನು ಅಪರಾಹ್ನದ ಮೇಲೆ
ಉಗ್ರವಾದಿಯಾಗಿ ಉರುಳಿಸುತ್ತಿರುವನೇನೋ ಜನರ ತಲೆ
ಮಂತ್ರಿ ಇಂದು ನುಡಿದ ಮಾತ ಹಳಿಯುವ ಅಧ್ಯಕ್ಷ ನಾಳೆ
ಅಧ್ಯಕ್ಷರ ಮೇಲೆ ಪ್ರತಿ ಪಕ್ಷದವರಿಂದ ಬೈಗುಳದ ಮಾಲೆ
ದಿನಕ್ಕೊಂದು ಸುಳ್ಳನಾಡುವ ಆಡಳಿತಗಾರರು ಈಗ ಅಲ್ಲಿ
ಎಂದು ನಿಜವ ನುಡಿಯುವರೋ ಎಂಬ ನಿರೀಕ್ಷೆ ನಮಗಿಲ್ಲಿ
ಚುನಾವಣೆಯ ತನಕ ಮುಂದೂಡಬೇಕಾದ ಪ್ರಮೇಯ ಇಲ್ಲಿತ್ತು
ನಮ್ಮವರಿಗೂ ನೋಡಿ ಪಾಕಿಸ್ತಾನದಿಂದ ಹೇಗೆ ಸಹಾಯ ಸಿಕ್ತು
ಹೊಸ ಸರ್ಕಾರ ಬಂದ ಮೇಲೆ ನಮ್ಮವರು ಹಳೆಯದನು ಮರೆತು
ಮತ್ತೆ ಕೈಕುಲುಕುತ್ತಾರೇನೋ ತಾಜಮಹಲಿನ ಮುಂದೆ ಕಲೆತು
*********************************
ಪ್ರತಿಕ್ರಿಯೆ (4)