img_2786

 

ನನ್ನ ಈ ದಿನದ ಬೆಳಗನ್ನ ಸಂಗೀತದಲೆಯಲಿ ತೇಲಿಸಿದ ಕೊಳಲು

img_2771

ಟೀ ಕುಡ್ಕೊಂಡು, ಕೊಳಲು ಕೇಳ್ತಾ ತಬಲದಲ್ಲಿ ಹಾಕಿದ ತಾಳಕ್ಕೆ ಮನ ಕುಣೀತಿತ್ತು. ಕನಸುಗಳ ನನಸಾಗಿಸುತ್ತ ದಾಟಿದ ಮೈಲುಗಲ್ಲುಗಳ ನೆನೆಯುವ ಸಮಯ. ನಾನು ಕೆಲಸ ಮಾಡ್ತಿರೋ ಕಂಪನಿಗೆ ೬ ವರ್ಷದ ಪ್ರಾಯ. ನಾಳೆ ಅದಕ್ಕೆ ನಮಗೆಲ್ಲ ಪಾರ್ಟಿ. ಬೆಳಗ್ಗೆ ಬೇಗ ಆಫೀಸಿಗೆ ವಾಪಸ್ಸಾಗಿ, ಆ ದಾಟಿದ ಮೈಲುಗಲ್ಲುಗಳನ್ನ ಅಳೆಯಲಿಕ್ಕೆ ಬರೆದ ಈ ಲೇಖನ ಮಾಲೆಯನ್ನ ಮುಂದುವರೆಸಲಿಕ್ಕೆ ಪ್ರಾರಂಭಿಸಿದಾಗ, ಎಲ್ಲಿಂದ ಶುರು ಮಾಡ್ಲಿ ಅನ್ನಿಸ್ತಿತ್ತು. ಈಗ ನನ್ನ ಮನಸ್ಸು ನಿರಾಳ.  ನೂರಾರು ಐಡಿಯಾಗಳು. ನನ್ನ ಲ್ಯಾಪ್ ಟಾಪಿನಲ್ಲಿ, ಮ್ಯೂಸಿಕಲ್ ಕೀಬೋರ್ಡ್, ಗಿಟಾರ್, ಮ್ಯೂಸಿಕ್ ಸಿಂಥಸೈಸರ್ ಎಲ್ಲವುಗಳ ಸಮ್ಮಿಲನ.

ಸಂಜೆ ಇದರ ಮುಂದಿನ ಭಾಗದಲ್ಲಿ ಕೊನೆಯವಾರ ದಾಟಿದ ಮೈಲುಗಲ್ಲೊಂದರ ಬಗ್ಗೆ ಬರೀತೇನೆ.