ಮಗಳು ಸ್ಮಿತಾಳಿಗೆ
ಇಂದಿನಿಂದ ಶುರು ಆಗಿದೆ
ಪದವಿ ಪೂರ್ವ ಪರೀಕ್ಷೆ

ನಮಗಾದರೋ
ಅವಳ ಸುಂದರ ಭವ್ಯ
ಭವಿಷತ್ತಿನ ನಿರೀಕ್ಷೆ

ಹನ್ನೆರಡು ವರುಷ
ಕೇಳಿದ್ದು ಸಣ್ಣ ಸಣ್ಣ
ಕದನಗಳ ಶಬ್ದ

ಶುರು ಆಗಿದೆ ನೋಡಿ
ಇಂದು ಆಕೆಯ ಪಾಲಿಗೆ
ಈ ಮಹಾಯುದ್ಧ

ಮಗಳು ಗೆದ್ದು ವಿಜಯ
ಪತಾಕೆ ಹಾರಿಸುವಳೆಂಬ
ಭರವಸೆ ನಮ್ಮ ಮನದಲ್ಲಿ

ಹಿಂದೆ ಗಳಿಸಿದುದಕ್ಕಿಂತ
ಕಡಿಮೆ ಗಳಿಸದಿರಲಿ
ಎನ್ನುವ ಬೇಡಿಕೆಯೂ ಅಲ್ಲಿ

ಆಕೆಯ ಪ್ರಯತ್ನ ಸದಾ
ಇರುತ್ತದೆ ನೂರಕ್ಕೆ ನೂರು
ಅದಕ್ಕನುಮಾನ ಇಲ್ಲ

ಹೇಳಿ ನನ್ನ ಮಗಳಿಗೆ
ತುಂಬು ಹೃದಯದಿಂದ
ನೀವೆಲ್ಲಾ ಹರಸುವಿರಲ್ಲ?