ಕಂದಮ್ಮ

ಅಳಬೇಡ ಕಂದಮ್ಮ
ನಗುನಗುತಾ ಮಲಗಮ್ಮ
ಕಣ್ಣ ಮುಚ್ಚು ಕಣ್ಣಮ್ಮ
ಸುಖದ ಸ್ವಪ್ನ ಕಾಣಮ್ಮ
ಚಂದಮಾಮ ಬರುವನು
ತಾರೆಗಳ ತೋರುವನು
ತಾರೆಗಳ ತೋಟದಲಿ
ಬಾಲಕೃಷ್ಣನಿರುವನು
ನಿನ್ನೊಡನೆ ಆಡುವನು
ನಿನ್ನ ಹಾಡ ಕೇಳುವನು
ಮಾಧವನು ಹತ್ತಿರ
ಮುರಳಿಗಾನ ಸುಮಧುರ
ಆಡಿನಲಿದ ನಂತರ
ಆಗುವುದು ಎಚ್ಚರ.

ಅಹೋರಾತ್ರ.