" ಅಳು ಬರಿಸಿದವಳಿಗೆ"

ಕಪ್ಪು ಹುಡುಗನ ಬೆಪ್ಪು....
ಪ್ರೀತಿಯಲಿ ತಪ್ಪು ಹುಡುಕ ಬೇಡ......

ನಿನ್ನೆಡೆಗೆ ತುಡಿವ ಮನದ...
ಮಿಡಿತದಿ ಕಪಟವೆಣಿಸಬೇಡ.....

ಬರಿಯ ಹರೆಯದ ಜಿದ್ದಿಗೆ ಬಿದ್ದ.....
ಹಪಹಪಿಕೆ ಎಂದೆಣಿಸಬೇಡ.....

ಎಂದು ನಿವೇದಿಸಿಕೊಂಡು.....
ಬಿಕ್ಕಿದವನಿಗೆ.....

’ನಿಲ್ಲು... ನಿಲ್ಲು.....
ನನಗೂ ಅರ್ಥವಾಗುತ್ತೆ......
ಆದರೆ ಅದಕ್ಕೆ ನಾ ಹೊಣೆಯಲ್ಲ....’ಎಂದು
ನಕ್ಕುಬಿಟ್ಟಳು.....

ಭವದ ಎಲ್ಲಾ ಎಲ್ಲೇ ಮೀರಿ.....
ಅವನಲ್ಲಿ .....
ಅವನದಲ್ಲದ ಪ್ರಶ್ನೆ......
ಉಳಿಸಿಬಿಟ್ಟಳು....
’ಯೋಗ್ಯತೆ’....