ಕ್ಲಾಸ್ರೂಮಿನ ಮೊದಲ ಬೆಂಚು
ಸನ್ಯಾಸಿಗಳಿಗೆ
ಮಾತ್ರ ಮೀಸಲು
ನಗು ಸಂತೋಷ
ತುಂಟಾಟಗಳನ್ನು
ತ್ಯಾಗ ಮಾಡಿರುವಂಥ
ಪುಣ್ಯ ಜೀವಿಗಳವರು
ಲೆಕ್ಚರರ್ ಗಳ ಕಣ್ಣಿಗೆ
ಮಾತ್ರವೇ ಕಾಣುವಂತಹವರು

ಕನಸನ್ನು ಕಾಣುವವರು
ಮೊದಲ ಬೆಂಚಿಗರಾದರೆ
ಅದನ್ನು ಹಂಚುವ ಕಾಯಕ
ಕೊನೆ ಬೆಂಚಿಗರದು(ನಮ್ಮದು)

ಕ್ಲಾಸಿನ ಜೀವಾಳ ನಾವು
ಸಂತೋಷದ ರಸಬುಗ್ಗೆ
ನಗೆಯ ಚಿಲುಮೆ
ಚಿಮ್ಮಿಸುತ್ತಾ
ಜೀವರಸವನ್ನು ತುಂಬುತ್ತಾ
ಕನಸು ಕಾಣುತ್ತಾ ಅನುಭವಿಸುತ್ತಾ
ಜೀವನದ ಪ್ರತಿಕ್ಷಣವನ್ನು
ಅನುಭವಿಸುವ
ಜೀವಸೆಲೆಯೇ ನಾವು
ಕಾಲೇಜಿನ ಕ್ಲಾಸ್ರೂಮಿನ
ಕಣ್ಮಣಿಗಳು...