ನಿನ್ನ ಸ್ನೇಹ ಆದ ದಿನದಿಂದ ಸಖೀ
ಅದೇಕೋ ನಾನು ಈಗ ಇಲ್ಲ ಸುಖಿ
ಅದೆಂತಹ ದಿವ್ಯ ಮೋಡಿ ನೋಡು
ನಿನ್ನಿಂದಾಗಿ ನನ್ನ ಬುದ್ಧಿ ಕುರುಡು
ದೂರದಲಿದ್ದೂ ನೀ ನನ್ನೊಳಗಿರುವಂತೆ
ನನ್ನೊಳಗಿದ್ದೂ ನೀನು ಇಲ್ಲೇ ಇರದಂತೆ
ಬಯಕೆ ಮೂಡಿದೆ ಈಗ ನನ್ನ ಮನದೊಳಗೆ
ಬಂದು ಬಿಡು ಒಮ್ಮೆ ಬೇಗ ನೀನನ್ನ ಬಳಿಗೆ
--------
ನನ್ನ ಕಣ್ಣ ಮುಂದೆ ಬಂದೆ ನೀನು
ನಿನ್ನ ಕಣ್ಣಲ್ಲೇ ನನ್ನ ಕೊಂದೆ ನೀನು
ನಾನು ಸ್ಥಬ್ಧನಾದೆ ಕಾಲು ಬರದೆ
ನಾ ಮೌನಿಯಾದೆ ಮಾತು ಬರದೆ
ನಿಂತಲ್ಲೇ ನಾ ಜೀವಚ್ಛವವಾಗಿ ಬಿಟ್ಟೆ
ನಿನ್ನ ಸ್ನೇಹದಿಂದ ನಾನ್ಯಾಕೆ ಕೆಟ್ಟೆ?
******************
(ಇದು ನೆಟ್ ಸ್ನೇಹದ ಪರಮಾವಧಿ - ಒಂದು ಕವಿ ಕಲ್ಪನೆ)
ಪ್ರತಿಕ್ರಿಯೆ (6)