ಮಳೆರಾಯ ನೀನೆಲ್ಲಿರುವೆ

ಬೇಗ ಬಾ ಬಾನಿನಿಂದ ಇಳೆಗೆ

ಹನಿ ಹನಿಯಾಗಿ ಇಳಿದು ಬಾ

ನನಗೆ ನೀರು ಉಣಿಸಲು ಬಾ

ಕದ್ದು ಮುಚ್ಚಿ ಯಾಕೆ ಮರೀಚಿಕೆ ಆದಿಯಾ

ಸಸಿ ಮರಿಗಳಿಗೆ ಕರಿ ಮೋಡ ಚದುರಿಸಿ

ಪಳ ಪಳನೆ ಹನಿಗರಿ ಬಾ

ಪ್ರಾಣ ಉಳಿಸು ಬಾ ಬಾನಿನಿಂದ

ಹರಿಯುವ ನದಿಗೆ ಮರು ಜೀವ

ಕೊಡು ಬಾ ಮಳೆರಾಯ

ಪಶು ಪಕ್ಷಿ ಜಲಚರ ಜೀವಿಗಳಿಗೆ ಜೀವ

ನೀಡು ಬಾ ಮಳೆರಾಯ

ಮಳೆರಾಯ ಮಳೆಗಾಲದ ಮಳೆಯಾಗಿ

ಕೆರೆ ಹಳ್ಳ ಹೊಂಡ ಕಾಲುವೆಗೆ ಚಲಿಸು ಬಾ

ರೈತಣ್ಣನ ಕಣ್ಣೀರು ಒರೆಸಿ

ನಿನ್ನ ಕಣ್ಣೀರು ಸುರಿಸು ಬಾ ಮಳೆರಾಯ.

-ಹೆಚ್. ವಿರುಪಾಕ್ಷಪ್ಪ ತಾವರಗೊಂದಿ