ಕಣ್ಣು ಮುಚ್ಚಿ 

ಕಣ್ಣು ಬಿಡಿ

ಜಗವೆಲ್ಲ ಕಾಣುವುದು

ಮನವೆಲ್ಲ ಅರಿಯುವುದಯ.

 

ಮನಸು ಹಾಳಾದಂತೆ

ಕನಸುಗಳೆಲ್ಲ ಬಲಿ ಆಗುತ್ತಿದೆ

ಹುಚ್ಚು ಮನಸಿಗೆ ಬಿದ್ದು

ಹುಚ್ಚನಾಗಬೇಡ ಬಿಟ್ಟುಬಿಡು 

 

ಹೊಸ ಮನುಷ್ಯನಾಗು

ನೀ ಮೊದಲು 

ಚಿಂತೆ ಚಿತೆ ಮಾಡುತ್ತದೆ

ಯೋಚಿಸು ನೀ ಮೊದಲು

 

ಬಾಳ ಕಟ್ಟಿ 

ಬದುಕ ಸಾಗಿಸುವ ನಾವಿಕ ನೀನು

ಬಿರುಗಾಳಿಗೆ ಸಿಲುಕಿ 

ತರಂಗ ಎಲೆ ಆಗಿ ಹೋಗಬೇಡ

                                   ಹೆಚ್. ವಿರುಪಾಕ್ಷಪ್ಪ  ತಾವರಗೊಂದಿ