ನಾನು ಇದೆ ಎಂದ ಕೂಡಲೇ
ಇಲ್ಲದ್ದು ಇದೆಯೆಂದಾಗುವುದಿಲ್ಲ
ನಾನು ಇಲ್ಲ ಎಂದ ಕೂಡಲೇ
ಇದ್ದದ್ದು ಇಲ್ಲವೆಂದಾಗುವುದಿಲ್ಲ
ಸತ್ಯವನ್ನು ನೂರು ಮಂದಿ ನೂರು ಬಾರಿ
ಸುಳ್ಳೆಂದರೂ ಅದು ಅಸತ್ಯವಾಗುವುದಿಲ್ಲ
ಅಸತ್ಯವನ್ನು ನೂರು ಮಂದಿ ನೂರು ಬಾರಿ
ಸತ್ಯವೆಂದರೂ ಅದು ಸತ್ಯವಾಗುವುದಿಲ್ಲ
ನನ್ನ ಕಣ್ಣೆದುರು ಇರುವವರಿಗೆ ನನ್ನ ಕಣ್ಣೆದುರು
ಇಲ್ಲದವರ ಹೆಸರಲ್ಲಿ ನೋವುಂಟು ಮಾಡಲಾರೆ
ಯಾವುದೇ ಸೀಮೆ ಇಲ್ಲದೇ ಮನುಷ್ಯತ್ವ ಇರುವ
ಮನುಜರರೆಲ್ಲರೂ ನನ್ನ ದೃಷ್ಟಿಯಲ್ಲಿ ನಮ್ಮವರೇ
ಮನುಷ್ಯತ್ವವೇ ಇಲ್ಲದವರು ನಮ್ಮವರಾದರೂ
ನನ್ನ ಪಾಲಿಗಂತೂ ಅಲ್ಲ ಅವರು ಮನುಜರೇ
ನಾನು ಆಸ್ತಿಕನೋ ಅಲ್ಲಾ ನಾಸ್ತಿಕನೋ ಎನ್ನುವುದು
ಇದು ನಿಜದಿ ನನ್ನ ತೀರಾ ವೈಯಕ್ತಿಕ ವಿಷಯ
ನನ್ನ ದೃಷ್ಟಿಯಲ್ಲಿ ಪ್ರೀತಿ ಮತ್ತು ಭಕ್ತಿ ಇವೆರಡೂ
ಸದಾ ಆಗಿರಬೇಕು ಜಗದಿ ಖಾಸಗಿ ವಿಷಯ.
ಪ್ರತಿಕ್ರಿಯೆ (5)