(ಕುವೆಂಪು ಅವರ ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೆ ರಾಗದಲ್ಲಿ ಹಾಡಿಕೊಳ್ಳಬೇಕು)
ಮೂಗನೊಳು ಕೈ ಹಿಡಿದು, ಒಳಗೆ ಬಾ ಅರ್ಜಿಗನೆ
ನೆಲೆಯಲ್ಲವೀ ಗುಡಿಯು, delay a ಬಲೆಯು |ಪಲ್ಲವಿ|
ಅರ್ಜಿಗಳ ಧಣಿಯಿಲ್ಲ, ಜಾಗೃತಿಗಳಿಲ್ಲ|
ವಿಲೇವಾರಿಯಾರತಿಯ ಜ್ಯೋತಿ ಇಲ್ಲಾ||
ಋಷುವತ್ತಿನಾನಂದ ಕೂಪಗೊಂಡಿಹುದಿಲ್ಲ|
ಹುಸಿಕತೆಯ ಕಡಲುಕ್ಕಿ ಹರಿವುದಿಲ್ಲಿ||
ಸರಸದಿಂ ಸುಲಿಯುತಿದೆ ಇಲಿಯು ಪತ್ರಾಯಣವನಿಲ್ಲಿ
ಜೇಡರಾಬಲೆಯಲ್ಲಿ ಫೈಲು ನಿದ್ರಿಸುತ್ತಿದೆ ಇಲ್ಲಿ|
ಕುಶಲತೆಗೆ ಬೆರೆಗಾಗಿ ತೂಕವಾಗಿದೆ ಜೇಬು ಇಲ್ಲಿ
ಮೂರ್ಛೆಯಲ್ಲಿ ಮೈಮರೆತು ತೇಲುತಿದೆ ಋಣಭಾರವಿಲ್ಲಿ||
- ಅಕ್ಕಿ ಹೆಬ್ಬಾಳು ರಾಮಣ್ಣ ಮಿತ್ರ
ಸಂಗ್ರಹ -ನಾಸೋ
ಪ್ರತಿಕ್ರಿಯೆ (3)