ಸಖೀ,

ಅರಿಯಬೇಕು ನಾವು, ಜೀವನವೊಂದು ಪಯಣ
ಮುಂದುವರಿಯಲೇ ಬೇಕು ಇಲ್ಲದಿದ್ದರೂ ತ್ರಾಣ

ನಾಲ್ಕು ಹೆಜ್ಜೆ ನಮ್ಮ ಜೊತೆ ಜೊತೆಗೆ ನಡೆಯುವವರು
ಮುಂದೆ ನಮ್ಮ ಸಂಗವನೇ ತೊರೆದು ತೆರಳುವವರು

ಅಲ್ಪ ಸಮಯದ ಸಂಗ ಜೀವನವನೇ ಆವರಿಸಿ ಬಿಡಬಹುದು
ದೀರ್ಘಕಾಲದ ಸಂಗವನೂ ಅಲ್ಪದರಲೇ ಕಳೆಯಬಹುದು

ಹಾದಿಯಲಿ ಸಿಕ್ಕವರೆಲ್ಲಾ ನಮ್ಮ ಮನೆಗೆ ಬರುವವರಲ್ಲ
ಮನೆಗೆ ಬಂದವರೆಲ್ಲಾ ನಮ್ಮ ಮನದೊಳಗೆ ಬರುವವರಲ್ಲ

ಮನದೊಳಗೆ ಬಂದವರ ನಾವು ತೊರೆಯಲಾಗುವುದೇ ಇಲ್ಲ
ತೊರೆದು ತೆರಳಿದವರ ಮತ್ತೆ ತಿರುಗಿ ಕರೆಯಲಾಗುವುದಿಲ್ಲ

ನಮ್ಮವರೆಂದರಿತರೆ ನಿಜದಿ ಇಲ್ಲಿ ನಮ್ಮವರೇ ಎಲ್ಲಾ
ಇಲ್ಲವೆಂದರಿತರೆ, ಸಖೀ, ಈ ಜಗದಿ ಯಾರಿಗಾರೂ ಇಲ್ಲ
******************************