ಪೈಲಟ್ - ಗೋವಾ ಕ ಶಾನ್

 ಇದು ಈ ವ್ಯಕ್ತಿಯ "ಡೈಲಾಗ್"..

ಅವನ (ಪೈಲಟ್‌ನ ಪೈಲಟ್‌: ) ಮಾತು ಈ ರೀತಿ ಮುಂದುವರೆದಿತ್ತು.. ಹಿಂದಿಯಲ್ಲಿ.. "ಇದು ಬೈಕ್ ಟ್ಯಾಕ್ಸಿ ಸರ್ವೀಸ್ ಸರ‍್. ನಿಮಗೆ ಎಲ್ಲೂ ಸಿಗಲ್ಲಾ ಸರ‍್.. ಈ ವ್ಯವಸ್ಥೆ, ಕೇವಲ ಗೋವಾದಲ್ಲಿ ಮಾತ್ರ ಇದನ್ನ ನೀವು ನೋಡೋಕ್ಕೆ ಸಾಧ್ಯ. ಇದರಲ್ಲಿರೋದು ಸರ‍್ ಮಜ.. ಇದರಲ್ಲಿ ನಿಮಗೆ ನಿಜವಾದ ಗೋವಾ ದರ್ಶನ ಸಿಗೋದಲ್ವಾ? ಕಾರ‍್ ಟ್ಯಾಕ್ಸಿಲಿ ಏನ್ ತಾನೇ ಸಿಗುತ್ತೆ ಸರ‍್? ಎಲ್ಲಾ ಮುಚ್ಚಿಹೋಗಿರುತ್ತೆ ಅದರಲ್ಲಿ..ಇದು ಸರ‍್.. ಆರಾಮಾಗಿ ಕುಳಿತುಕೊಳ್ಳಿ.. ಆರಾಮಾಗಿ, ಎಲ್ಲಾದನ್ನೂ ನೋಡಿ.. ಅಲ್ವಾ ಸರ‍್"

ನಾನು: ಸರಿ..ಸರಿ.. ನೀವು ಯಾವ ತರಹ ಚಾರ್ಜ್ ಮಾಡ್ತೀರಿ?

ಪೈಲಟ್‌ನ ಪೈಲಟ್‌: ಲೋಕಲ್‌ನವರಿಗೆ ಕಿಲೋಮೀಟರ್‌ಗೆ ಅಂದಾಜು, ೬೦-೮೦ ರೂವರೆಗೆ, ಹೊರಗಿನವರಿಗೆ(ಬಕ್ರಾ ಸಿಕ್ರೆ).. ೧೫೦-೨೦೦ ತನಕ.. ಲೋಕಲ್‌ನವರ ಹತ್ರ ಜಾಸ್ತಿ ತೆಗೋಳೋಕ್ಕೆ ಆಗುತ್ತಾ ಸರ‍್ (ಮುಗುಳ್ನಗೆ)..(ನಿಜದಲ್ಲಿ ಇದೂ ಸುಳ್ಳು ನನ್ನ ಹತ್ರ.. ಲೋಕಲ್‌ನವರ ಹತ್ರ ೧೫ರಿಂದ ೨೦ರೂ ಒಳಗೆ ಶುರುವಾಗುತ್ತೆ ಅಂತಾ ಕೇಳ್ಪಟ್ಟಿದ್ದೆ..)

ನಾನು: ತುಂಬಾ ಥ್ಯಾಂಕ್ಸ್..

ಗೋವಾ ಕ ಶಾನ್ - ಪೈಲಟ್

 
ನಾನೀಗ ಕೆಲಸದ ಮೇಲೆ ಐಟಿಸಿ(ITC) ಕಂಪನಿಯ ಕೊಂಕಣ ಬ್ರಾಂಚ್ ಅಡಿಯ ಪ್ರದೇಶಗಳಿಗೆ ಭೇಟಿ ಕೊಡುತ್ತಿದ್ದೇನೆ.
ಈ ಸಮಯದ ಮಧ್ಯೆ ಸಿಗೋ ಕೆಲವೇ ಕೆಲವು ರಸನಿಮಿಷಗಳನ್ನು ನಿಮ್ಮೊಡನೆ ಹಂಚಿಕೊಳ್ಳೋ ಉದ್ದೇಶ ನನ್ನದು.. 
 
ನಿಮ್ಮೊಲವಿನ,
ಸತ್ಯ..