ಬೆಳಗ್ಗೆ ೭.೩೦, ನಾನಿನ್ನು ಮಲಗಿದ್ದೆ. ನನ್ನದು UK Shift timings ಮದ್ಯಾಹ್ನ ೨.೦೦ ರಿಂದ ರಾತ್ರಿ ೧೧.೦೦ ರವರೆಗೆ, ಹಾಗಾಗಿ ಬೆಳಗ್ಗೆ ಸ್ವಲ್ಪ ತಡವಾಗಿ ಏಳುತ್ತೇನೆ. ನನ್ನ ಅತ್ತೆ ಮಾವ ನಮ್ಮೊಟ್ಟಿಗೆ ಇಲ್ಲದಿರುವುದರಿಂದ ಬಚಾವಾದೆ :-)

ನೆನ್ನೆ ರಾತ್ರಿಯೂ ನಿದ್ರೆಯಿರಲಿಲ್ಲ, ರಾತ್ರಿ ಪ್ರಯಾಣ ಊರಿನಿಂದ ಹಾಗಾಗಿ ಈ ದಿನ ಚೆನ್ನಾಗಿ ನಿದ್ರೆ ಮಾಡೋಣ ಎಂದು ನನ್ನವರಿಗೆ ತಿಂಡಿಯನ್ನೂ ಮಾಡಿಕೊಡದೆ ಮಲಗಿದ್ದೆ.

೭.೩೦ ಕ್ಕೆ ಕೆಳಗೆ ನಮ್ಮ ಮನೆ ಓನರ್ ಮನೆಯಿಂದ ಏನೋ ಗಲಾಟೆ ಕೇಳಿಸಿತು, ಸ್ವಲ್ಪ ಸಮಯದ ನಂತರ ತಿಳಿಯಿತು ಇಬ್ಬರೂ ಅಪ್ಪ ಅಮ್ಮ ಸೇರಿಕೊಂಡು ಅವರ ಮಗನನ್ನು (ಸುಮಾರು ೧೮-೧೯ ವರುಷವಿರಬಹುದು, ಇಂಜಿನಿಯರಿಂಗ್ ಮಾಡ್ತಿದ್ದೀನಿ ಎಂದು ಹೇಳಿದ ನೆನಪು) ಬಯ್ದು, ಅವರ ಅಪ್ಪ ಹೊಡೆಯುತ್ತಿದ್ದರು, ೨ ದಿನದ ಹಿಂದೆಯಷ್ಟೇ ಸರಿಯಾಗಿ ಓದುತ್ತಿಲ್ಲ, ನನ್ನ ಹಣನೆಲ್ಲ ವೇಸ್ಟ್ ಮಾಡ್ತಿದೀಯ ಅಂತ ಬಯ್ತಿದ್ದಿದ್ದು ಕೇಳ್ಸಿಕೊಂಡಿದ್ದೆ. ಆದರೆ ಈ ದಿನ "ಮಕ್ಕಳು ಅಂತ ಬಿಟ್ಟರೆ ಏನೋನೋ ಮಾಡಕ್ ಶುರು ಮಾಡಿದ್ದಿಯ? ಬಿಟ್ ಹೊರಗಡೆ ಹೋಗಹಂಗಿಲ್ಲ" ಅಂತ ಜೋರಾಗಿ ಬಯ್ಯುತ್ತ ಹೊಡಿತಿದ್ರು.

ಆದ್ರೆ ನನ್ಗನ್ಸಿದ್ದು, ಹೊಡ್ಯೋದ್ರಿಂದ ಹುಡುಗ ಬುದ್ದಿ ಕಲಿತಾನ? ಅವನೊಂದಿಗೆ ಅಪ್ಪ ಅಥವಾ ಅಮ್ಮ ಆತ್ಮೀಯತೆಯಿಂದ ಮಾತನಾಡಿ ಸಮಸ್ಯೆಗೆ ಪರಿಹಾರ ಹೇಳ್ಬೋದ್ ಅಲ್ವ. ಒಂದ್ ದಿನ ಬಯ್ಯೋದು ಹೊಡ್ಯೋದು ಸರಿ, ಆದ್ರೆ ದಿನಾನು ಅದೇ ಮಾಡಿದ್ರೆ ಅವ್ನು ದ್ವೇಷ ಬೆಳೆಸಿ ಕೊಳ್ಲೋಳ್ವ? ಅವ್ನಿಗೆ ಅನ್ನಿಸ್ಬೋಹುದು ನಾನ್ ಅವರು ಹೇಳಿದ್ಕೆ ವಿರುದ್ಧವಾಗೆ ಮಾಡ್ಬೇಕು ಅಂತ. ಜೊತೆಗೆ ಅವ್ನು ಸರಿಯಾಗಿ ಓದ್ತ್ಹಿಲ್ಲ ಅನ್ಸುತ್ತೆ ಹಾಗಾಗಿ ಅವರ ಅಪ್ಪ ಯಾವಾಗ್ಲೂ ಅವ್ನ ಸ್ವಲ್ಪ ಕೀಳಾಗಿ ನೆಡ್ಸ್ಕೊತಾರೆ. ಇದು ಅವನಿಗೆ ಬೇರೆಯವರು ಮುಂದೆ ಅವಮಾನಿಸಿದಂತೆ. ಇದು ಅವ್ರೆ ತಮ್ಮ ಮಗನ ಭವಿಷ್ಯನ ಹಾಳು ಮಾಡಿದಂತೆ ಅಲ್ವ?

ನಿಮ್ಮ ಅಭಿಪ್ರಾಯ ಏನು?

-ಶೋಭಾ