ಇಂದಿನ ಈ ಸೋಲು ಮುಂದಿನ ನಿನ್ನ ಗೆಲುವಿಗೆ ದಾರಿ
ಒಮ್ಮೆಲೇ ನಕ್ಷತ್ರಗಳ ಹಿಡಿಯಬಾರದು ಆಕಾಶಕ್ಕೆ ಹಾರಿ
ಸೋಲಿನ ರುಚಿ ಉಂಡವಗೆ ಗೆಲುವಿನ ರುಚಿ ಸಹನೀಯ
ಒಮ್ಮೆ ಗೆದ್ದರೆ ಮತ್ತೆ ಸೋಲುಂಬುದದೆಷ್ಟು ಅಸಹನೀಯ
ಪಕ್ಷ ಮತ ಜಾತಿ ರಾಜಕೀಯದಿಂದ ಇರಬೇಕು ದೂರ
ಆಗ ನೀ ಆಗುವೆ ಜನರ ಹೃದಯಗಳನೇ ಗೆಲ್ಲುವ ಶೂರ
ಶಾಶ್ವತ ಅಲ್ಲ ಗೆಲುವು ಬುದ್ಧಿವಂತಿಕೆಯಿಂದ ಜನರ ಗೆದ್ದರೆ
ಶಾಶ್ವತ ಜನರ ಒಲವು ಹೃದಯವಂತಿಕೆ ನಿನಗೆ ತಂದರೆ
ನಿನ್ನ ಭವ್ಯ ಭವಿಷತ್ತಿನ ಕನಸು ಕಾಣುತಿವೆ ನನ್ನ ಕಂಗಳು
ಮುಂದಿನದಕೆ ಭದ್ರ ಬುನಾದಿ ಇಂದಿನ ಏಳು ಬೀಳುಗಳು
ಮಾತಾಪಿತರ ಆಶೀರ್ವಾದ ಎಂತಿಹುದೋ ನಿನ್ನೊಂದಿಗೆ
ಅಂತೆಯೇ ನಾನೂ ಇರುವೆ ಸದಾ ನಿನ್ನ ಜೊತೆ ಜೊತೆಗೆ
**********************************
ಇಂದು ನಡೆದ, ಉಡುಪಿ ಬಾರ್ ಕೌನ್ಸಿಲ್ ಕಾರ್ಯದರ್ಶಿಯ ಚುನಾವಣೆಯಲ್ಲಿ
ಸೋಲುಂಡ ನನ್ನ ತಮ್ಮ ಪೃಥ್ವಿರಾಜನಿಗೆ.
ಪ್ರತಿಕ್ರಿಯೆ (1)