ನಲ್ಲಾ.....

ನಾ ತಪ್ಪು

ಮಾಡಿದರೆ,

ನಿಜ...

ನೀ ಕೊಡು.... ಬೇಕಾದ ಸಜ

ನಿನ್ನ ಮೌನದ ಹೊರತು.....

ನಿನ್ನ ಪ್ರೀತಿಯ ಪಿಸು ಮಾತಿಲ್ಲದೆ...

ಕಾಡುವ ಹುಸಿ ಛೇಡಿಕೆ ಇಲ್ಲದೆ....

ಬದುಕು ಬರಡು ಬಯಲೆನಿಸುವುದು....

ಒಣಗಿ ಮರಳಾದ ಕಡಲೆನಿಸುವುದು...

ಮಾತೊ೦ದನುಸುರಿ....

ಉಲ್ಲಾಸವ ಹೊಮ್ಮಿಸು ಬಾ....

ಬದುಕ ಹಸಿರಾಗಿಸು ಬಾ...

ಅ೦ತರಾಳದಲಿ ಒಲವ ಜಿನುಗಿಸು ಬಾ...

ನಿನ್ನ ಸವಿ ಸು೦ದರ ಸ್ಪರ್ಶದಿ೦ದ...

ನನ್ನೊಳಗಿನ ನಿನ್ನವಳ

ಒಮ್ಮೆ ಸ್ಪರ್ಶಿಸಿ, ಹರ್ಶಿಸು ಬಾ!!