ದುಗುಡವೇಕೆ ಮುದ್ದು ಮನವೆ?

ನೋವು, ದು:ಖ ನಿನಗೆ ಘನವೇ?

ಏನು ಭಯ?ಏನು ಕ್ಷಯ?

ನ೦ಬು ನನ್ನ! ನಿನ್ನ ಶಕ್ತಿ ಅಕ್ಷಯ!!!

ಪಡೆದರೇನು? ಕಳೆದರೇನು?

ತು೦ಬು ಸಾಗರಕೆ ಎಷ್ಟು ನೀರು

ಮೊಗೆದರೇನು? ಸುರಿದರೇನು?

ಮುಖ ಕಮಲವು ಮುದುಡದಿರಲಿ

ಅವನಾಟವ ಮೆಚ್ಚುತಿರಲಿ!!!