modmani ಯವರ ಒಂದು ಬುಡುಬುಡಿಕೆ ಪ್ರಸಂಗ ಬ್ಲಾಗ್ನಲ್ಲಿ ಮಾಲತಿಯವರ ಕಮೆಂಟ್ ನೋಡಿ ತಟ್ಟನೆ ಬಂದ ಆಲೋಚನೆಯನ್ನು ಸಂಪದಿಗರ ಮುಂದಿಡುತ್ತಿದ್ದೇನೆ..

ಸಂಪದಿಗರೆಲ್ಲಾ ಸೇರಿ ಒಂದು ನಾಟಕ ಮಾಡೋಣ ಅಂತ. ಇಲ್ಲಿ ನಾಟಕಕ್ಕೆ ಬೇಕಾದ ಎಲ್ಲಾ ಸಂಪನ್ಮೂಲಗಳು ಸಿಗುತ್ತವೆ. ಕವಿಗಳಿದ್ದಾರೆ, ಸಾಹಿತಿಗಳಿದ್ದಾರೆ, ರಂಗ ಹಿನ್ನಲೆಯವರು ಇಲ್ಲಿದ್ದಾರೆ. ಎಲ್ಲರೂ ಸೇರಿ ಒಂದು ಸ್ವತಂತ್ರ ನಾಟಕ ಬರೆದು.. ತಾಲೀಮು ನಡೆಸಿ.. "ಸಂಪದ ನಾಟಕರಂಗ" ಎಂಬ ತಂಡವನ್ನು ಕಟ್ಟಿ ನಾಟಕವೇಕೆ ಮಾಡಬಾರದು. ಇದರ ಬಗ್ಗೆ ಸಂಪದಿಗರು ತಮ್ಮ ಅಭಿಪ್ರಾಯ ನೀಡಬೇಕೆಂದು ವಿನಂತಿ.

ಬಹುತೇಕರಿಗೆ ರಂಗದ ಮೇಲೆ ಬರಬೇಕೆಂಬ ಆಸೆ ಇರುತ್ತದೆ.. ಆದರೆ ಅದು ಈಡೇರಿರುವುದಿಲ್ಲಾ.. ಅದು ಇಲ್ಲಿ ಈಡೇರುವಂತಾಗಲಿ..

ಚಿತ್ರ ಕೃಪೆ : ಗೂಗಲ್