ನನ್ನದೇನಿದ್ದರೂ ಇನ್ನು ಒಂದು ನಗುಮುಖ ಮತ್ತೈದು ಪೂರ್ಣ ವಿರಾಮ
ಶಬ್ದ ಬರೆದು ಪ್ರತಿಕ್ರಿಯಿಸುವುದಕ್ಕೆ ಕೊಡಬೇಕೆಂದಿದ್ದೇನೆ ನಾನು ವಿರಾಮ
ಯಾವ ಶಬ್ದ ಯಾವ ಅರ್ಥ ಪಡೆದು ಯಾರ ಮನಸ ನೋಯಿಸುವುದೋ
ಯಾವ ಕ್ಷಣ ಯಾರಲ್ಲಿ ವೈರಾಗ್ಯ ಮೂಡಿಸಿ ಇಲ್ಲಿಂದಾಚೆ ದೂಕಿಬಿಡುವುದೋ
ಬರೇ ನಗುಮುಖ, ವ್ಯಕ್ತ ಪಡಿಸಲು ನಿಮ್ಮ ಬರಹಕ್ಕೆ ನನ್ನ ಸಹಮತವೆಂದು
ಮತ್ತೆ ಐದು ಪೂರ್ಣವಿರಾಮ ತಿಳಿಸಲು ಹೇಳುವುದಿನ್ನೂ ಬಾಕಿ ಇದೆಯೆಂದು
ಕುಂಬಳಗಾಯಿ ಕಳ್ಳ ಅಂದರೆ ಹೆಗಲು ಮುಟ್ಟಿ ನೋಡ್ಕೊಂಡ ಅನ್ನಬಹುದು
ಆ ವರ್ಗದಲ್ಲಿ ನಾನಿಲ್ಲ ನಾನು ಸುಭಗ ಎಂದು ಹೇಗೆ ಅಂದುಕೊಳ್ಳಬಹುದು
ಪರೋಕ್ಷವಾಗಿ ದೂರಿದಾಗ ನನಗೇನೋ ಅಂತಂದುಕೊಂಡರೆ ನಿಜಕ್ಕೂ ಕ್ಷೇಮ
ಅನ್ವಯವಾಗಿದ್ದೂ ಒಪ್ಪದವರಿಗಿಂತ ಇಲ್ಲದೆ ಅನ್ವಯಿಸಿಕೊಂಡಿರುವವರು ಕ್ಷೇಮ
ನನ್ನ ಅಳಿಲ ಸೇವೆ ಸಂಪದವ ಬೆಳೆಸಿ ಮತ್ತು ಸಂಪದಿಗರನಿಲ್ಲಿ ಉಳಿಸೋದಿಕ್ಕೆ
ನಾನೇ ಸರಿ ಅನ್ನುವುದಕ್ಕಲ್ಲ ಇದು ಬರೇ ನನ್ನ ಮನ ಹಗುರ ಮಾಡಿಕೊಳ್ಳೋದಕ್ಕೆ
ಇದಕ್ಕಿಂತ ಹೆಚ್ಚಿಗೆ ಮಾಡಲೇನಿಹುದು ನೀವೇ ತಿಳಿಸಿ ನನಗೀಗ ತೋಚದೇನೂ
ಬಹುಷಃ ಬ್ಲಾಗನ್ನು ಖಾಲಿಯಾಗಿ ಪ್ರಕಟಿಸಬೇಕು ನಾನು ಅಲ್ಲಿ ಬರೆಯದೇ ಏನೂ
ನನ್ನ ಕವನಗಳಿಗೆ ನೀವೆಲ್ಲಾ ಮನಬಿಚ್ಚಿ ಪ್ರತಿಕ್ರಿಯಿಸಬಹುದು ಅಡೆತಡೆಗಳೇನಿಲ್ಲ
ನಾನಿನ್ನೂ ಬರೆಯಬೇಕೆಂದರೆ ನೀವು ಪ್ರತಿಕ್ರಿಯಿಸಿ ನನ್ನ ವಿಮರ್ಶಿಸುತಿರಬೇಕಲ್ಲ
:)
.....
ಪ್ರತಿಕ್ರಿಯೆ (9)