ಬರೆಯುವವನು ಬರೆಯುತಿರಬೇಕು
ಕೊರೆಯವವನು ಕೊರೆಯುತಿರಬೇಕು
ಬರೆಯುವವನ ಬರೆಯಬೇಡ ಎಂದರೆ
ಕೊರೆಯುವವನ ಕೊರೆಯಬೇಡ ಎಂದರೆ
ಬರೆಯುವವನು ಕೊರೆಯತೊಡಗಿದರೆ
ಕೊರೆಯುವವನು ಬರೆಯತೊಡಗಿದರೆ
ಅಧ್ವಾನವೋ ಆಧ್ವಾನ ಯಾರು ಸಹಿಸುವವರು
ಓದುಗರ ಬವಣೆಯ ಯಾರು ಅರಿಯುವವರು
ಪ್ರತಿಕ್ರಿಯೆಗಳಭ್ಯಾಸ ಆಗಿಬಿಟ್ಟಿದೆ ಸಂಪದಿಗರಿಗೆ
ಯಾವ ಕಟ್ಟಳೆಯೂ ಇಲ್ಲದಿರಲೀ ಬಂಧುಗಳಿಗೆ
ತಮ್ಮ ಹದ್ದಿನಲ್ಲಿರುವುದನು ಬಲ್ಲರೆಲ್ಲ ಓದುಗರು
ಮಿತಿಮೀರಿದರೆ ಹೊರ ದೂಕುವರು ನಾಡಿಗರು
ಇಂದು ನಾ ನಡೆಸಿದ್ದು ಒಂದು ಸಣ್ಣ ಪರೀಕ್ಷೆ
ನನಗಿತ್ತು ಇಂತಹದೇ ಫಲಿತಾಂಶದ ನಿರೀಕ್ಷೆ
ಯಾರಿಗೂ ಯಾರೂ ಬೇಕಿಲ್ಲ ಎಲ್ಲಾ ಸ್ವತಂತ್ರರು
ಆದರೆಲ್ಲರೂ ಎಲ್ಲರಿಗೂ ಬೇಕು ಬಿಟ್ಟಿರಲಾರರು
ಮೌನದ ಕಿರಿಕಿರಿಗಿಂತ ಮಾತಿನ ವರಸೆ ಲೇಸು
ಕುಹಕದ ನಗೆಗಿಂತ ಕು-ಪ್ರತಿಕ್ರಿಯೆಗಳೇ ಲೇಸು
ನಾನು ಇಂತೇ ಇರುವೆ ಏಕೆಂದರೆ ನಾನಿಂತೇ
ನಾನಿಂತಿರಲಾಗದೊಡೆ ನಾನೇಕೆ ಇರಬೇಕಂತೆ
ಪ್ರತಿಕ್ರಿಯೆ (6)