ಇವಳು ನಮ್ಮಮ್ಮ
ನನ್ನ ಹೆತ್ತಮ್ಮ
ಇವಳು ಕಲಿತವಳಲ್ಲ
ಆದರೂ ವಿದ್ಯೆಗೆ ಬರವಿಲ್ಲ.
ಅವಳ ಮನಸು ಸಾಗರ
ಹೃದಯವದು ಕಡಲು
ತಾನುನ್ನುವದ ಬಿಟ್ಟು
ನನಗನ್ನ ವಿಟ್ಟವಳು.
ನನ್ನ ಉಸಿರಾದವಳು
ತನ್ನ ಬಸಿರಿನಲಿ ನನ್ನ ಹೆತ್ತವಳು.
ಕತ್ತಲ ಗರ್ಭದಿಂದ
ಬೆಳಕಿಗೆ ತಂದವಳು
ಸಾಧನೆಗೆ ದೇಹ ಕೊಟ್ಟವಳು.
ತಾನೇನು ಕಲಿಯಲೇ ಇಲ್ಲ
ಆದರೆ ನಮಗೆಲ್ಲ ಕಲಿಸಿದವಳು
ಏನು ಕೊಟ್ಟರೆ ಸಿಗುವಳು
ಜೀವನವನೆ
ನಮಗಾಗಿ ಸವಿಸಿದವಳು.
ಕಷ್ಟಗಳು ಎದುರಾಗಿ
ಮನವು ಕಂಗೆಟ್ಟಾಗ
ಸಾಂತ್ವನದ ಸವಿಯನುನಿಸಿದವಳು
ತನ್ನ ಬೇಸರವ ಮರೆತು
ನಮ್ಮ ಬೇಸರವ ಕಳೆದವಳು
ಭಗವಂತ ನಮಗಾಗಿ
ತಾಯಾಗಿ ಬಂದವಳು.
ಸಕ್ಕರೆಯ ನುಡಿಯಂತ
ಅಕ್ಕರೆಯ ತೋರುವಳು
ನಾವು ನಕ್ಕರೆ ತಾನೂ ನಗುವಳು.
ಯಾವಾಗಲೂ ನಮಗಾಗಿ ಬದುಕಿದವಳು
ನಮ್ಮ ಖುಷಿಯಲ್ಲಿ ತನ್ನ ಖುಷಿ ಕಂಡವಳು
ನಡಯುವಾಗ ಕೈ ಹಿಡಿದವಳು
ಬಿದ್ದಾಗ ಮೇಲೆತ್ತಿದವಳು.
ಹೊತ್ತು ಹೊತ್ತುಗೆ
ಕೈ ತುತ್ತ ನಿತ್ತವಳು.
ಇವಳು ನಮ್ಮಮ್ಮ
ನಮ್ಮ ಹೆತ್ತಮ್ಮ.
*********************
ಎಮ್.ಡಿ.ಎನ್.ಪ್ರಭಾಕರ್
******************
ಪ್ರತಿಕ್ರಿಯೆ (5)