ಪೂಜಾರಿ ವರ ಕೊಡ್ನಿಲ್ಲ ಅಂತೇನಿಲ್ಲ.. ಇನ್ನೇನ್ ಕೊಡೋನಿದ್ದ. ಅಷ್ಟ್ರಲ್ಲಿ ಒಂದು ಟ್ವಿಸ್ಟು..
ವಾಪಸ್ ಊರ್ಗೋಗಕೆ ತುಂಬಾ ಜನರ ಹತ್ರ ಅಪ್ರೂವಲ್ ತಗೊಳ್ಳೊ ಸರ್ಕಸ್ ಮುಗ್ಸಿ, ಟ್ರಾವೆಲ್ ಡಿಪಾರ್ಟ್ಮೆಂಟೋರ್ಗೆ ಟಿಕೆಟ್ ಬುಕ್ ಮಾಡಕ್ಕೇಳಿ ಮೂರು ದಿನ ಆದ್ರು ಅವ್ರದ್ದೇನೇನೋ ತಕ್ರಾರು. ಇನ್ನೇನ್ ಈವತ್ತು ಅದೂ ಆಗ್ಬುಡ್ತದೆ ಈ ವಾರಾಂತ್ಯಕ್ಕೆ ಊರ್ ಸೇರ್ಕಳ್ಳಾನ ಅನ್ನಷ್ಟ್ರಲ್ಲಿ ನೋಡಪ್ಪ ಒಂದು ಮಿಂಚೆ ಬಂತು. "ಇನ್ ಸ್ವಲ್ಪ ದಿನಕ್ಕೆ ಪೊಸ್ಟ್ಪೋನ್ ಮಾಡ್ಕಳಪ್ಪ" ಅಂತ ನನ್ ಬಾಸು ಕೇಳಿದ್ರು. ನನ್ ಜೊತೆ ಕೆಲ್ಸ ಮಾಡೊ ಇನ್ನೊಬ್ಬ ಅರ್ಜೆಂಟಾಗಿ ಊರಿಗ್ ಹೋಗ್ಬೇಕಿತ್ತು. ಪಾಪ ಮನೇಲಿ ಯಾರೊ ತೀರೋದ್ರಂತೆ. ಈ ಸಮಯದಲ್ಲಿ ಜಾಸ್ತಿ ಪ್ರಶ್ನೆ ಕೇಳದೂ ಚೆಂದಾಗಿರಲ್ಲ. ಅವನು ವಾಪಸ್ ಬರೋವರ್ಗೂ ನಾನಿಲ್ಲೇ. ಪಾನಿ ಪೂರಿ ತಿನ್ನಕಿನ್ನೂ ಎಷ್ಟ್ ದಿನ ಕಾಯ್ಬೇಕೋ!!
:(