ಒಣಗಿ ಹೋದ ನನ್ನನ್ನು ಕಂಡು ನಗುತ್ತಿರುವೆಯಾ
ಹೇಳು ಮಗು ನೀ ನನ್ನಂತೆ ಮತ್ತೆ ಚಿಗುರಬೆಲ್ಲೆಯಾ?
ವಿಚಿತ್ರವೇನಲ್ಲ ನಮ್ಮ ಜೀವನ ಚಕ್ರವಿರುವುದೇ ಹೀಗೆ
ಒಣಗಿದಷ್ಟೂ ಮತ್ತೆ ಚಿಗುರುತ್ತೇವೆ ಮೊದಲಿನ ಹಾಗೆ
ನಿಮ್ಮ ಜೀವನ ಹಾಗಲ್ಲ ಒಣಗುತ್ತಾ ಸಾಗುತ್ತಿರುವಿರಿ
ಮತ್ತೆಲ್ಲೂ ಕಾಣದಂತೆ ಮಾಯವಾಗಿಯೇ ಬಿಡುವಿರಿ
ಸೋತ ನಮ್ಮನ್ನು ಕಂಡು ನಗಲು ಅವಕಾಶ ನಿಮಗೆ
ನೀವು ಸೋತುರುಳಿದಾಗ ನಾವೇ ನಿಮ್ಮ ಸೇವೆಗೆ
ನಾವು ಚಿಗುರಿದರೂ ನಿಮ್ಮ ಮನಕೆ ಮುದ ನೀಡುವೆವು
ಒಣಗಿದಾಗಲೂ ನಿಮ್ಮ ಮನಕೆ ಈ ನಗುವ ನೀಡುವೆವು
ನೀವು ಹಾಗಲ್ಲ ಚಿಗುರಿದಾಗಲಷ್ಟೆ ಎಲ್ಲರನು ನಲಿಸುವಿರಿ
ಒಣಗಿ ಉದುರಿದಾಗ ಉಳಿದೆಲ್ಲರಿಗೂ ನೋವನುಣಿಸುವಿರಿ
ಈ ಚಿತ್ರಕ್ಕಾಗಿ (http://sampada.net/image/20776)
ಪ್ರತಿಕ್ರಿಯೆ (4)