ಇವತ್ತು ಅಪ್ಪ ಮನೆಗೆ ಬೇಗ ಬಂದಿದ್ರು. "ಕಾರ್ ಓಡಿಸೋದು ಕಲಿಯುವಿಯಂತೆ ನಡಿ ಹೋಗೋಣ" ಅಂದ್ರು (ನನ್ ಬಳಿ LL ಇದೆ). ಸರಿ ಹೊರಟೆ. ಮಳೆ ಶುರುವಾಯ್ತು. "ಇನ್ನೊಂದು ದಿನ ಹೋಗೋಣ. ಈಗ ಹೊರಗೆ ಊಟಕ್ಕೆ ಹೋಗೋಣ" ಅಂದ್ರು. ಸರಿ ವಿಜಯನಗರದಲ್ಲಿರೋ ಇಂದ್ರಪ್ರಸ್ಥಕ್ಕೆ ಹೋದ್ವಿ. ನಾವು ಇತರೆ ತಿಂಡಿಗಳ ಜೊತೆ ಬೇಬಿ ಕಾರ್ನ್ ಮಂಚೂರಿಯನ್ ಕೂಡ ಹೇಳಿದ್ವಿ. ಎಲ್ಲಾ ತಿಂಡಿಗಳು ಬಂದ್ರೂ ಅದನ್ನು ಮಾತ್ರ ಕೊಟ್ಟಿರಲಿಲ್ಲ.
ಅಪ್ಪ ವೇಟರ್ ನ ಕೇಳಿದ್ರು "ಯಾಕಪ್ಪ ಇನ್ನು ಕೊಟ್ಟಿಲ್ಲ" ಅಂತ. ನಾವು ಆರ್ಡರ್ ಮಾಡಿದ್ದ ಬೇಬಿ ಕಾರ್ನ್ ಮಂಚುರಿಯನ್ ತಪ್ಪಾಗಿ ಪಕ್ಕದ ಟೇಬಲ್ ಅವರಿಗೆ ಸರ್ವ್ ಮಾಡಿದ್ರು. ಅದನ್ನೆ ಹೇಳಲು ಹೋಗಿ ಆ ವೇಟರ್ " ಸಾರಿ ಸರ್ ನಿಮ್ ಬೇಬಿ ಅವ್ರು ತಗೊಂಡ್ರು" ಅಂದ್ರು. ನಾನು ನನ್ನ ತಮ್ಮ ಒಳಗೊಳಗೆ ನಗಲು ಶುರು ಮಾಡಿದ್ವಿ. ಅಪ್ಪ ಕೇಳಿದ್ರು "ಏನಾಯ್ತು" ಅಂತ. ನನ್ ತಮ್ಮ ಹೇಳ್ದ "ಅವರು ಅವರ ಮೊಮ್ಮಗುವನ್ನೆ ಎತ್ತಿಕೊಂಡು ಹೋಗಿದ್ದು ನಿಮ್ ಬೇಬಿಯನ್ನಲ್ಲ" ಅಂತ.ಅದಕ್ಕೆ ಅಪ್ಪ ಅಂದ್ರು "ಹೂಂ ನಮ್ ಎರಡೂ ಬೇಬಿಗಳು ಇಲ್ಲೇ ಇದ್ದಾವಲ್ಲ"
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ವಾಗರ್ಥ
ಲಾಲಿಹಾಡು
ಎರಡು ಸಾಲು
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (2)