ರಿಚರ್ಡ್ ಅಟೆನ್ಬರೋ ನಿರ್ದೇಶಿತ "ಗಾಂಧಿ" ಚಲನ ಚಿತ್ರವನ್ನು ಹತ್ತಾರು ಬಾರಿ ನೋಡಿದ್ದೇನೆ.
ಆದರೆ ಅದಷ್ಟೂ ಬಾರಿಯೂ ಹಿಂದಿ ಚಿತ್ರವನ್ನೇ ನೋಡಿದ್ದಾಗಿತ್ತು.
ಆದರೆ ೧೦-೧೫ ದಿನಗಳ ಹಿಂದೆ ಟಿವಿಯಲ್ಲಿ ಆಂಗ್ಲಭಾಷೆಯ ಚಿತ್ರವನ್ನು ನೋಡುವ ಅವಕಾಶ ಸಿಕ್ಕಿತು.
ಅದರಲ್ಲಿ ಮಹಾತ್ಮಾಗಾಂಧಿಗೆ ಗುಂಡೇಟು ಬಿದ್ದಾಗ ಅವರ ಬಾಯಿಯಿಂದ "ಓ ಗಾಡ್" ಅನ್ನುವ ಉದ್ಘಾರ ಹೊರಡುತ್ತದೆ.
ಕೇಳಿದ ನನಗೆ ಆಶ್ಚರ್ಯವಾಯ್ತು. ಆಂಗ್ಲದಲ್ಲಿಯೂ "ಹೇ..ರಾಮ್" ಅನ್ನುವ ಶಬ್ದವನ್ನೇ ಉಳಿಸಿಕೊಂಡಿದ್ದರೆ ಏನಾಗುತ್ತಿತ್ತು...ಅನ್ನುವುದು ನನ್ನ ಪ್ರಶ್ನೆ.