ನಮ್ಮ ಸರ್ಕಾರಕ್ಕೆ ಅದೇಕೋ ಇದೀಗ ಕೆಟ್ಟ ಕಾಲ
ರೆಡ್ಡಿಗಳು ನೋಡಿ ನಿಧಾನಕ್ಕೆ ಬಿಚ್ಚುತ್ತಿದ್ದಾರೆ ಬಾಲ

ಸಿರಿಯೊಂದಿಗೆ ಅಧಿಕಾರವೂ ಸೇರಲು ಅಧೋಗತಿ
ತನ್ನವರಿಗೇ ಜನರು ಕಾಣಿಸದೇ ಇರಲಾರರು ಗತಿ

ಗಣಿ ದೊರೆಗಳಿಗೆ ಗುಟ್ಟು ರಟ್ಟಾಗುವುದೆಂಬ ಭಯ
ಕೇಂದ್ರದ ತನಿಖೆಯಿಂದ್ಯಾರೂ ನೀಡುತ್ತಿಲ್ಲ ಅಭಯ

ತಮಗೇನು ಬೇಕೆಂಬುದನೇ ಇವರು ಅರಿತಂತಿಲ್ಲ
ತಾವು ಕುಳಿತ ಮರದ ರೆಂಬೆಯ ಕಡಿಯುತಿಹರಲ್ಲ

ಅಧಿಕಾರದ ಗದ್ದುಗೆಯೇರಿ ವರುಷವಾದುದಕೆ ಈಗ
ಸಂಭ್ರಮ ಏಕೆ ಇರಲಾರರೇ ಐದು ತುಂಬುವಾಗ

ಅಭಿವೃದ್ಧಿ ಕಾರ್ಯಗಳ ಲೆಕ್ಕ ಗಣನೆಗೇ ಸಿಗುವುದಿಲ್ಲ
ಆದರೂ ಮರ್ಯಾದೆ ಬಿಟ್ಟವರಂತೆ ವರ್ತಿಸುತಿಹರಲ್ಲ

ಕುಮಾರಿ ಅಲ್ಲಿ ಅತ್ತು ಕೆಡಿಸಿದರೂ ಸಭೆಯ ಶೋಭೆ
ನಾ ನಿನ್ನ ಬಿಡಲಾರೆ ಎನುತಿಹನಲ್ಲಾ ಮುದಿಗೂಬೆ

ಎಲ್ಲಾ ಸಫಲ ಪುರುಷರ ಹಿಂದೆ ಹೆಣ್ಣಿರುವಳೆಂಬಂತೆ
ಈತನ ಮಹಾಪತನವೂ ನಿಜದಿ ಈಕೆಯಿಂದಲಂತೆ

ಎಷ್ಟು ಒದೆ ತಿಂದರೂ ಬುದ್ಧಿ ಬರುವಂತೆ ಕಾಣುತ್ತಿಲ್ಲ
ಹೀಗೇಯೇ ನಡೆದರೆ ಐದು ವರ್ಷ ಉಳಿಯುವುದಿಲ್ಲ