ಸಂಪದ ಬಳಸುವ ಸದಸ್ಯರ ಯೂಸರ್ ಐಡಿ ಹಾಗು ಹೆಸರುಗಳಿಗೆ ಕೆಳಗಿನ ನಿಯಮಗಳು ಅನ್ವಯಿಸುತ್ತವೆ:

  • ಯೂಸರ್ ಐಡಿ: ಯೂಸರ್ ಐಡಿ ಸದಸ್ಯರ ಹೆಸರಾಗಿರಬೇಕು ಅಥವ ಹೆಸರು ಸೂಚಿಸುವಂತಿರಬೇಕು.
    • ಉದಾಹರಣೆಗೆ: raj.kumar ಅಥವ rajkumar.
    • ಅನಾಮಧೇಯ ಅಕೌಂಟುಗಳು: ಅನಾಮಧೇಯ ಐಡಿಗಳನ್ನು ವಿಶೇಷ ಸಂದರ್ಭಗಳನ್ನು ಹೊರತುಪಡಿಸಿ ಕೂಡಲೆ ಬ್ಲಾಕ್ ಮಾಡಲಾಗುವುದು. ಅನಾಮಧೇಯರಾಗಿ ಉಳಿಯಬಯಸುವವರು ದಯವಿಟ್ಟು ಸಂಪದ ನಿರ್ವಹಣೆಗೆ ([email protected] ಐಡಿಗೆ) ಒಂದು ಮೇಯ್ಲ್ ಹಾಕಿ ಮೊದಲೇ ತಿಳಿಸುವುದು ಉತ್ತಮ. 
      • ಅಕೌಂಟ್ ಬ್ಲಾಕ್ ಆಗದಿರುವಂತೆ ಆಯಾ ಅಕೌಂಟಿನ ಚಟುವಟಿಕೆಗೆ ತಕ್ಕಂತೆ ಕೆಲವು ಸಂದರ್ಭಗಳಲ್ಲಿ ನಿಮ್ಮ ಪರಿಚಯ, ಮಾಹಿತಿ ಸಂಪದ ನಿರ್ವಹಣೆಯೊಂದಿಗೆ ಹಂಚಿಕೊಳ್ಳಬೇಕಾಗಿ ಬರಬಹುದು. 
  • ಪೂರ್ಣ ಹೆಸರು: ಪೂರ್ಣ ಹೆಸರು ಕನ್ನಡದಲ್ಲಿ ಬರೆದ ನಿಮ್ಮ ಹೆಸರು ಆಗಿರಬೇಕು. ಹೀಗಿಲ್ಲದ ಅಕೌಂಟುಗಳನ್ನು ಯಾವುದೇ ಮುನ್ಸೂಚನೆಯಿಲ್ಲದೆ ಕೂಡಲೆ ಬ್ಲಾಕ್ ಮಾಡಲಾಗುವುದು.

(ಮೇಲಿನ ನಿಯಮಗಳ ಕುರಿತು ಸದಸ್ಯರು ಸಲಹೆಗಳನ್ನು ಪ್ರತಿಕ್ರಿಯೆ ಮೂಲಕ ತಿಳಿಸಬಹುದು. ಸೂಕ್ತವಾಗಿದ್ದಲ್ಲಿ ಅದನ್ನು ಗಮನಕ್ಕೆ ತೆಗೆದುಕೊಳ್ಳಲಾಗುವುದು)