ಕನ್ನಡ ಬರವಣಿಗೆಗೆ ಯಾವ ತಂತ್ರಾಂಶ ಇರಬೇಕು ಎಂಬುದರ ಬಗ್ಗೆ ಆಗಾಗ ಚರ್ಚೆ ನಡೆಯುತ್ತಿರುವುದು ಹೊಸದಲ್ಲ.ಈ ಕುರಿತು ನಾನೂ ಸಹ ಆಗಾಗ ಬರೆಯುತ್ತಿರುತ್ತೇನೆ. ಕಳೆದವಾರ ಪ್ರಜಾವಾಣಿಗೆ ಬರೆದು ಕಳುಹಿಸಿದ್ದೆ. ನಿರೀಕ್ಷೆಯಂತೆಯೇ ಅದು ಪ್ರಕಟವಾಗಲಿಲ್ಲ. ಆ ಲೇಖನವನ್ನು ಸಂಪದಿಗರೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ;-
***************************************************************************************
ಮಾನ್ಯರೇ,೧೯-೦೬-೨೦೦೯ ___LINK_OPEN_href="/%3Ctable%20style=%22width:194px;%22%3E%3Ctr%3E%3Ctd%20align=%22center%22%20style=%22height:194px;background:url%28http://picasaweb.google.com/s/c/transparent_album_background.gif%29%20no-repeat%20left%22%3E%3Ca%20mce_thref=%22http://picasaweb.google.com/ishwar.shastri/RecentlyUpdated?authkey=Gv1sRgCL2T6vHOt8mkxwE&feat=embedwebsite%22%3E%3Cimg%20mce_tsrc=%22http://lh5.ggpht.com/_jF1efNApAvg/SktRlayl-fE/AAAAAAAAHjI/176KKV2Cz-M/s160-c/RecentlyUpdated.jpg%22%20width=%22160%22%20height=%22160%22%20style=%22margin:1px%200%200%204px;%22%3E%3C/a%3E%3C/td%3E%3C/tr%3E%3Ctr%3E%3Ctd%20style=%22text-align:center;font-family:arial,sans-serif;font-size:11px%22%3E%3Ca%20mce_thref=%22http://picasaweb.google.com/ishwar.shastri/RecentlyUpdated?authkey=Gv1sRgCL2T6vHOt8mkxwE&feat=embedwebsite%22%20style=%22color:#4D4D4D;font-weight:bold;text-decoration:none;%22%3ERecently%20Updated%3C/a%3E%3C/td%3E%3C/tr%3E%3C/table%3E"___ಪ್ರಜಾವಾಣಿ-ವಾಚಕರವಾಣಿಯಲ್ಲಿ ಡಾ. ದೊಡ್ಡರಂಗೇಗೌಡರು ಬರೆದ ’ಗಣಕಗಳಲ್ಲಿ ಕೇವಲ ಕನ್ನಡ ಅಕ್ಷರಗಳನ್ನು ಮಾತ್ರ ಮೂಡಿಸಿ ಅದರಿಂದ ಕಾಗದ ಪತ್ರಗಳನ್ನು ಬರೆಯುವಕೆಲಸ ಮಾತ್ರ ಆದರೆ ಸಾಲದು.ಕರ್ನಾಟಕದಲ್ಲಿರುವ ಎಲ್ಲಾ ಸರಕಾರಿ ಮತ್ತು ಖಾಸಗಿ ಕಛೇರಿಗಳು,ಬ್ಯಾಕುಗಳು, ಸಹಕಾರಿ ಸಂಸ್ಥೆಗಳು ಮುಂತಾದಕಡೆಗಳಲ್ಲಿ ಗಣಕೀಕರಣ ಕನ್ನಡದಲ್ಲಿಯೇ ಆಗಬೇಕು.’ಎಂಬುದು ಕನ್ನಡಪರ ಕಾಳಜಿ ಇರುವ ಎಲ್ಲರೂ ಒಪ್ಪಿಕೊಳ್ಳುವ ಸತ್ಯವಾದ ಮಾತು.
ಕನ್ನಡಪರ ಕಾಳಜಿ ಇರುವವರೆಲ್ಲಿ ಹೆಚ್ಚಿನವರು ’ನುಡಿ’ತಂತ್ರಾಂಶವನ್ನು ಇಷ್ಟಪಡುವುದಿಲ್ಲ ಹಾಗೂ ಅದನ್ನು ವಿರೋಧಿಸುತ್ತಾರೆ ಎಂಬುದೂ ಸಹ ಸತ್ಯವಾದ ಮಾತು
ಆಗ್ಲಮಾಧ್ಯಮದಲ್ಲಿ ಬೆಳೆದ ಮುಂದಿನ ಜನಾಂಗ ಕನ್ನಡವನ್ನುಉಳಿಸಿಕೊಳ್ಳುತ್ತದೆ ಎಂಬುದೂ ಅಂಶಯದ ಮಾತು.ಅಂತಹದರಲ್ಲಿ, ಕೀಲೀಮಣೆಯಲ್ಲಿ F ಹಾಗೂ ಶಿಫ್ಟಿನ ಪಾರುಪತ್ಯದ ನುಡಿ ತಂತ್ರಂಶವನ್ನು ಕಲಿತು ಒಗ್ಗಿಸಿಕೊಳ್ಳುವುದು ಇನ್ನೂ ಸಂಶಯದ ಮಾತು.
ಹೊಸ ಜನಾಂಗಕ್ಕೆ ಸೈಕಲ್ಲು, ಮೊಬೆಲ್ಲು, ಕಂಪ್ಯೂಟರ್ ಗಳನ್ನು ಬೇರೆಯವರು ಕಲಿಸಿಕೊಡುವ ಅವಶ್ಯಕತೆ ಇಲ್ಲ. ಅವುಗಳು ಅವರ ಬೆಳವಣಿಗೆಯ ಜೊತೆಗೇ ಮೈಗೂಡುತ್ತ ಹೋಗುತ್ತದೆ. ಇಂಗ್ಲೀಶ್ ವರ್ಣಮಾಲೆಯ ೨೬ ಅಕ್ಷರಗಳೂ ಕರಗತವಾಗುತ್ತವೆ. ಆದರೆ ಇವರು ಶಿಫ್ಟನ್ನು ಬಳಸುವುದಿಲ್ಲ. ಶೆಫ್ಟಿನ ಸಹಾಯವಿಲ್ಲದೇ ನುಡಿ ತಂತ್ರಂಶದಿಂದ ಬರೆಯಲು ಸಾಧ್ಯವಿಲ್ಲ. ಇವರಿಗೆ ಕನ್ನಡ ಬರವಣಿಗೆ ರೇಜಿಗೆ ಹುಟ್ಟಿಸುವ ಕೆಲಸವಾಗುತ್ತದೆ. ಹೀಗಾಗಿ ಕನ್ನಡವನ್ನು ಕೈ ಬಿಡುತ್ತಾರೆ. ಅಲ್ಲಿಗೆ ಕನ್ನಡವೂ ಸಂಸ್ಕೃತದ ಸಾಲಿನಲ್ಲಿ ಬಂದು ನಿಲ್ಲುತ್ತದೆ! – ಮೃತಭಾಷೆಯ ಎನ್ನಿಸಿಕೊಂಡು!!
ಕನ್ನಡದಲ್ಲಿ ಪ್ರಖ್ಯಾತರಾದ ಕೆಲವರು ಅಂತರಜಾಲದಲ್ಲಿಯೂ ಬರೆಯುತ್ತಾರೆ.ಅವರೆಲ್ಲರೂ ಸಾಧಾರಣವಾಗಿ ಬಳಸುವುದು ’ಬರಹ ತಂತ್ರಾಶವನ್ನು.’
ಅಂತರ್ ಜಾಲದಲ್ಲಿ ’ಸಂಪದ’ ಎಂಬ ಪತ್ರಿಕೆಯನ್ನು ನಡೆಸುತ್ತ ಕನ್ನಡದ ಕಂಪನ್ನು ಜಗತ್ತಿಗೆ ಬಿತ್ತರಿಸುತ್ತಿರುವ ಶ್ರೀ K P ನಾಡಿಗೇರ ಹಾಗೂ ಐಟಿ ಬೀಟಿಯ ಇನ್ನಿತರ ಸಮಾನಮನಾಸ್ಕರು ಸೇರಿ ಮಾನ್ಯ ರಾಜ್ಯಪಾಲರನ್ನು ಕಂಡು ’ನುಡಿ’ ಯಲ್ಲಿರುವ ದೋಷಗಳ ಬಗೆಗೆ ಮನವಿಪತ್ರ ಸಲ್ಲಿಸಿದ್ದು ವ್ಯರ್ಥವಾಗಿದೆ.
ಕನ್ನಡಕ್ಕೆ ಮಾರಕವಾದ ಈಗಿನ ತಂತ್ರಂಶವನ್ನು ಬದಲಿಸಬೇಕು ಇದು ಅತಿ ಅವಶ್ಯಕ. ಕನ್ನಡದ ಭವಿಶ್ಯವನ್ನು ಗಮನದಲ್ಲಿಟ್ಟುಕೊಂಡು,ಜನೋಪಯೋಗಿ ಹೊಸ ತಂತ್ರಾಂಶವನ್ನು ಕಂಡುಹಿಡಿಯಲು ಅನುಕೂಲವಾಗುವಂತೆ ’ಕನ್ನಡ ಗಣಕ ಪರಿಶತ್ತನ್ನು’ ಪುನರ್ ರಚಿಸಬೇಕು
************************************************************************
ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನಗಳನ್ನು ಇಲ್ಲಿ ನೋಡಿ
___LINK_OPEN_mce_thref="http://picasaweb.google.com/ishwar.shastri/RecentlyUpdated?authkey=Gv1sRgCL2T6vHOt8mkxwE&feat=embedwebsite"___
" />
ಪ್ರತಿಕ್ರಿಯೆ (4)