ಸಂಪದ ಈಗ ನಿಜವಾಗಿಯೂ "ಹೊಸ ಚಿಗುರು ಹಳೆ ಬೇರು"

ಭದ್ರ ಪಡಿಸಬೇಕಾಗಿದೆ ಇದೀಗ ನಾವೆಲ್ಲರೂ ಸೇರಿ ಇದರ ಬೇರು

 

ಚಂಡ ಮಾರುತಗಳಿಗೆ ಬಲಿಯಾಗಿ ಮತ್ತೆ ಉರುಳದಂತೆ ಧರೆಗೆ

ನೆರವಾಗಬೇಕಾಗಿದೆ ಎಲ್ಲರೂ ಈಗ ಓಗೊಟ್ಟು ನಾಡಿಗರ ಕರೆಗೆ

 

ಉಳಿಸಿ ಬೆಳೆಸುವ ಬಗ್ಗೆ ರೂಪುರೇಷೆಯೊಂದು ಸಿದ್ಧವಾಗಲಿ ಬೇಗ

ಪಾರದರ್ಶಕತೆ ಇದ್ದಲ್ಲಿ ಸಹಾಯವೂ ಹರಿದು ಬರಬಹುದು ಸರಾಗ

 

ಏನೇ ಆದರೂ ಸಂಪದಕ್ಕೆ ಎಂದಿಗೂ ಬರಬಾರದು ಅನಾಥ ಸಾವು

ಬರಿ ಮಾತಲ್ಲಲ್ಲದೇ ತನು ಮನ ಧನದಿಂದ ನೆರವಾಗಬೇಕು ನಾವು

-ಆಸು ಹೆಗ್ಡೆ, ಬೆಂಗಳೂರು