ಸಖೀ,
ನೀನಿಲ್ಲದಿದ್ದಾಗ
ನನ್ನ ಮನವ
ರಂಜಿಸಲು
ನನ್ನ ಕಣ್ಮುಂದೆ
ಶೃಂಗರಿಸಿ
ನಲಿದವರೆಷ್ಟೋ,
ನಿನ್ನಂತೆ
ಇನ್ಯಾರನ್ನೋ
ತಂದು ನಿಲ್ಲಿಸಿ
ನನ್ನೊಳಗಿನ
ಸೃಜನಶೀಲತೆಯ
ಬಡಿದೆಬ್ಬಿಸಲು
ಯತ್ನಿಸಿದವರು
ಅದೆಷ್ಟೋ,
ನನ್ನ ಮನ
ಕರಗಲೇ ಇಲ್ಲ
ನನ್ನ ಮನ
ಅಲ್ಲೆಲ್ಲಾ
ಬೆರೆಯಲೇ
ಇಲ್ಲ,
ನಿಜವಾಗಿಯೂ
ನನ್ನ ಮನ
ಹಿಂದಿನಂತೆ
ತೆರೆಯಲೇ
ಇಲ್ಲ,
ನಾನು
ಹೀಗೆಯೇ
ನಾನಾಗಿಯೇ
ಇದ್ದೆ
ಸುಮ್ಮನೆ
ನನ್ನೊಳಗೆ,
ನನ್ನ
___LINK_OPEN_href="http://athradi.wordpress.com/" target=_blank___ಮನದಂಗಳದಿ
ಗೀಚಿ ರಾಶಿಹಾಕುತ್ತಿದ್ದೆ
ಭಾವನೆಗಳೆದ್ದು
ಹೊರಳಾಡಿ
ಪದಗಳಾದಾಗ
ನನ್ನ ಮನದೊಳಗೆ,
ಆದರೂ
ಬರಲೇಬೇಕು ನೀನು
ನೀಡಬೇಕು
ನನ್ನ ಮನಕೆ ಸದಾ
ನಿನ್ನ ಬೆಂಬಲ,
ಬಂದೆನ್ನ ಮನದ
ಮಾತುಗಳಿಗೆ
ಕನ್ನಡಿಯಾಗಬೇಕು
ಎಂಬುದಾಗಿತ್ತು
ಸದಾ ಈ ನನ್ನ
ಮನದ ಹಂಬಲ!!!
****************
ಆಸು ಹೆಗ್ಡೆ, ಬೆಂಗಳೂರು
___LINK_OPEN_href="http://athradi.wordpress.com/" target=_blank___ಆಸುಮನ
ಪ್ರತಿಕ್ರಿಯೆ (2)