ಈ ಸೆಮಿಸ್ಟರಿನ ಮೊದಲನೆ analog communication lab ಅಲ್ಲಿ amplitude modulation using collector modulation technique ಅನ್ನೊ experiment ಮಾಡಬೇಕಿತ್ತು. ೨ ಗಂಟೆ ಪ್ರಯತ್ನ ಪಟ್ರೂ output ಅಲ್ಲಿ ಬರೀ noise ಕಾಣಿಸ್ತಿತ್ತು. ಆಗ ನನ್ನ lab partner ___LINK_OPEN_href="http://nayana-v.blogspot.com/" target="_blank"___ನಯನ ಮತ್ತೆ ನಾನು "ಏಕೆ ಹೀಗಾಯ್ತೋ ನಾವು ಕಾಣೆವು " ಅಂತ ಹಾಡೋಕೆ ಶುರು ಮಾಡಿದ್ವಿ. ಆಮೇಲೆ ಅದನ್ನೆ ಮುಂದುವರೆಸುವ ಅನ್ನೋ ಯೋಚ್ನೆ ಬಂತು. ಅಂತೂ ಇಂತೂ ನಮ್ಮ ಮೊದಲ ಅಣಕವಾಡನ್ನು ಬರೆದು ಮುಗಿಸಿದ್ವಿ. ಅದೇ ಧಾಟಿಯಲ್ಲಿ ಹಾಡಿಕೊಳ್ಳಿ.

ಚಿತ್ರ: ಅಂಜದ ಗಂಡು
ಸಂಗೀತ : ಹಂಸಲೇಖ
ಹಾಡು: ಏಕೆ ಹೀಗಾಯ್ತೋ ನಾನು ಕಾಣೆನು

ಆರ್. ಎನ್. ಜಯಗೋಪಾಲ್ ಹಾಗೂ ಹಂಸಲೇಖ ಅವರ ಕ್ಷಮೆ ಕೋರುತ್ತಾ ಇಲ್ಲಿ ಪ್ರಕಟಿಸುತ್ತಿದ್ದೇನೆ..ಹಾಗೆಯೇ ಇಂಗ್ಲೀಷ್ ಭಾಷೆಯ ಶಬ್ದಗಳು ಜಾಸ್ತಿಯಾಗಿರೋದಕ್ಕೆ ನಿಮ್ಮೆಲ್ಲರ ಕ್ಷಮೆ ಕೇಳುತ್ತೇನೆ...

ಏಕೆ ಹೀಗಾಯ್ತೋ ನಾನು ಕಾಣೆನು
ಏಕೋ ಮನದಲ್ಲಿ doubtu ಶುರುವಾಯ್ತೋ
bread board ಮೇಲಿನ circuit ಅಂತು ಬೊಂಬಾಟಾಗಿತ್ತೋ
ಏನೇ ಆದರೂ output ಮಾತ್ರ ಕಾಣದಾಯಿತೋ || ಏಕೆ ಹೀಗಾಯ್ತೋ ||

ಈ circuitiನಲಿ ಅದು ಏನಿದೆಯೋ
sir ಕೊಟ್ಟಂಗೆನೆ components ಇದೆಯೋ|| ಬ್ರೆಡ್ ಬೋರ್ಡ್ ||

ಈ resistru.... designಗೆ ತಕ್ಕಂತೆ ನಾನು ಹುಡುಕಾಡಿ ತಂದೆ
ಈ transistru... emitteru- collectoru ಬೇಸು ಚೆಕ್ ಮಾಡಿ ತಂದೆ
ತಲೆಯಂತು ಕೆಟ್ಟು ಹೋಯಿತು
ಬೇರೇನು ತೋಚದಾಯಿತು
ಮನದಲ್ಲಿ ನಿರಾಸೆ ತುಂಬಿ ಹೋಯಿತು.... || ಏಕೆ ||

ಈ components... check ಮಾಡಿ test ಮಾಡಿ ನಾನಂತೂ ಸುಸ್ತಾದೆ
ಈ IFT... wire ಕಿತ್ತು ಹೋಗಿತ್ತಂತ ನಾನಾಗ ತಿಳಿದೆ
IFT ಬದಲು ಆಯಿತು
outputtu clearu ಆಯಿತು
circuitu ಕೊನೆಗೂ debug ಆಯಿತು .....|| ಏಕೆ ||