ಕಂಬನಿ ತುಂಬಿದ ಕಣ್ಣುಗಳು,
ಒದ್ದೆಯಾಗಿಹ ಜೀವಗಳು,
ಹಸಿದ ಕಂದಮ್ಮಗಳು,
ಅಸಹಾಯಕ ಜೀವಗಳು,
ಒದ್ದಾಡುವ ಮನಸುಗಳು ಒಂದೆಡೆ.

ಕಿತ್ತಾಡುವ ಜನಗಳು,
ಅಧಿಕಾರದ ಮದಗಳು,
ಹಣಬಲದ ದರ್ಪಗಳು,
ಸ್ತ್ರೀ ವ್ಯಾಮೋಹದ ಕುರುಡುಕಂಗಳು,
ವಿಲಗುಡುವ ಜೀವಗಳು ಮತ್ತೊಂದೆಡೆ.

ಬಂದಿಹುದು ಮತ್ತೊಂದು ರಾಜ್ಯೋತ್ಸವ,
ಕನ್ನಡಮ್ಮನಿಗಿದು ನಿತ್ಯೋತ್ಸವ!
ಮರುಗುತಿಹುದು ಮನ ನೆನೆನೆನೆದು
ಯಡ್ಡಿ, ರೆಡ್ಡಿಗಳ ಚಡ್ಡಿಯಿಲ್ಲದ ಬದುಕ,
ಅಲ್ಲಮ ಪ್ರಭುವಿನ ಅಮರ ವಾಕ್ಯವ ನೆನೆದು.

ಹೆಣ್ಣು, ಹೊನ್ನು, ಮಣ್ಣಿಂಗೆ ಸತ್ತುದು ಕೋಟಿ,
ನಿನಗಾಗಿ ಸತ್ತವರನಾರನೂ ಕಾಣೆನಯ್ಯಾ,

ಸಾಯುತಿಹರ ಕಾಯುವರಾರೂ ಇಲ್ಲವಯ್ಯಾ,
ಸಾವಿನ ಮನೆಯಲಿ ಕೂಳ ಹುಡುಕುವ
ಧೂರ್ತರೇ ತುಂಬಿ ನಿಂತಿಹರಯ್ಯಾ!!