ಮನ್ನೆ[ಸುಮಾರು ೧೫ ದಿನಗಳ ಹಿಂದೆ] ನಮ್ಮ್ ಆಫೀಸ್ ನಾಗ ೩:೩೦ಕ್ಕ announcement ಮಾಡಿದ್ರು.. ನೆಲಮಹಡಿ ಕ್ಯಾಂಟೀನ್ ನಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ, ಎಲ್ಲರೂ ಭಾಗವಹಿಸಬೇಕು [ಇದನ್ನೂ ಇಂಗ್ಲೀಶ ನಲ್ಲಿ ಹೇಳಿದ್ರು]. Software Companyಒಳಗ ಕನ್ನಡ ರಾಜ್ಯೋತ್ಸವವನ್ನು ಆಚರಿಸ್ತಾರ ಅಂತ ಕೇಳಿದ್ದು ಇದ ಫಸ್ಟ ಟಾಯಿಮ್ ನನಗ. ಆತ್ ನಡಿರಿ ಹೋಗೂಣು ಅಂತ ನಾವ್ ಸ್ವಲ್ಪ ಮಂದಿ ಹೋದ್ವಿ... ನೂರ್ ದೀಡಶೇ ಮಂದಿ ಇದ್ರು... ಒಂದ್ ೨೦-೩೦ ಬ್ಯಾರೇದವರೂ ಇದ್ರು [ಕನ್ನಡಿಗರಲ್ಲದವರು]. ಇನ್ನು function ಸುರು ಆಗಿರ್ಲಿಲ್ಲ, ಮಾರಾಯಾ ಇವ್ರು ಇನ್ ೨ ತಾಸ ಹಾಕಿ ಕೊರಿತಾರ ಅನ್ಕೋತ ಕುತ್ತಿದ್ವಿ.. ಆದರ ಆದದ್ದ ಬ್ಯಾರೆ...
ಭಾಳ ಛಂದ ಕಾರ್ಯಕ್ರಮ ಮಾಡಿದ್ರು...
=> ಹೆಚ್ಚು ಕಡಿಮಿ ಯೆಲ್ಲಾ ಕಾರ್ಯಕ್ರಮ ಕನ್ನಡದಾಗ ಇದ್ದು.
=> ಕನ್ನಡದಲ್ಲಿ ೨-೩ ಗುಂಪು ಹಾಡಾ ಹಾಡಿದ್ರು, ಇಂಗ್ಲಶ ಶಬ್ದಕ್ಕ ಕನ್ನಡ ಸಮಾನಾರ್ಥಕ ಪದ ಹೇಳೂದು.
=> ಬ್ಯಾರೇದವರಿಗೆ ಕನ್ನಡದಾಗ ೧ ನಿಮಿಷ ಮಾತಾಡಲಿಕ್ಕೆ ಹೇಳಿದ್ರು. ಸ್ವಲ್ಪ ಮಂದಿ ಛೊಲೋ ಮಾತಾಡಿದ್ರು. ಸ್ವಲ್ಪ ಮಂದಿ ಮಾತ್ಡ್ಲಿಕ್ಕೆ ಪ್ರಯತ್ನ ಮಾಡಿದ್ರು...
=> ಕನ್ನಡದವರಿಗೆ ಆಶುಭಾಷಣ ಸ್ಪರ್ಧೆ ಇಟ್ಟಿದ್ರು.
ಯೆಲ್ಲಾ ಮುಗದ್ ಮ್ಯಾಲೆ ಅನಿಸ್ತು.. ಕನ್ನಡ ರಾಜ್ಯೋತ್ಸವ ಆಚರಿಸಿದರ ಹಿಂಗ ಆಚರಿಸಬೇಕು ಅಂತ ಅನಿಸ್ತು... ಅಂಧಂಗ ನಮ್ ಕಂಪನಿ ಹೆಸರು : Nokia Siemens Networks
ನೀವು ಕನ್ನಡ ರಾಜ್ಯೋತ್ಸವಕ್ಕ ಏನ್ ಮಾಡಿದ್ರಿ?
ಉತ್ತರ ಕರ್ನಾಟಕದ ಕಡೇ ಭಾಳಮಂದಿ ಉತ್ಸವ ಕ್ಕ ಉಸ್ತವ ಅಂತಾರ ಅದಕ್ಕ ಶೀರ್ಷಿಕೆ ಹಂಗ ಬರದೇನಿ.
ಪ್ರತಿಕ್ರಿಯೆ (1)