ಪದೇ ಪದೇ ಸಂದೇಶ ಕಳುಹಿಸಿ

ಕುಶಲೋಪರಿ ವಿಚಾರಿಸುತ್ತಿದ್ದ

ಜಂಗಮ ದೂರವಾಣಿ ಸಂಖ್ಯೆಗೆ

ಸಂದೇಶ ರವಾನಿಸಿ ಕೇಳಿದೆ ಹೀಗೆ:

 

"ಯಾರ್ರೀ ನೀವು ಅಪರಿಚಿತರು

ಹೀಗೆ ನನ್ನ ಬಗ್ಗೆ ಸುಖಾ ಸುಮ್ಮನೇ

ವಿಚಾರಿಸ್ತೀರಲ್ಲಾ?

 

ಉತ್ತರಿಸಲು ನನಗೆ

ನಿಮ್ಮ ಪರಿಚಯ ಆಗಿರಬೇಕಲ್ಲಾ?"

 

"ನಾನು ನಿಮ್ಮ "___LINK_OPEN_href="http://athradi.wordpress.com/" target=_blank___ಆಸುಮನ" ದ

ಓದುಗೆ, ಅಲ್ಲದೆ ಆಗಿದ್ದೇನೆ

ನಾನೀಗ ನಿಮ್ಮ "ಫ್ಯಾನು"

 

"ನನಗೇಕೋ ಚಳಿ ಆಗ್ತಿದೆ

ಸದ್ಯಕ್ಕೆ ನಿಲ್ಲಿಸಿ ಬಿಡ್ತೀರಾ

ನನಗೇನೂ ಬೇಕಾಗಿಲ್ಲರೀ

ಈ ಅಪರಿಚಿತ "ಫ್ಯಾನು"

 

"ಬೇಡವೆಂದರೆ ಹೇಗೆ

ನೀವ್ಯಾರು ಬೇಡವೆನ್ನಲು?"

 

"ಸರಿ ನಿಮ್ಮಿಷ್ಟ, ಆದರೆ

ನಿಜಕ್ಕೂ ಮನಸ್ಸಿಲ್ಲ ಕಣ್ರೀ

ನನಗೆ ಅಪರಿಚಿತರೊಂದಿಗೆ

ಹೀಗೆಲ್ಲಾ ಸಂಭಾಷಿಸುತಿರಲು"

****************

 

(ಆದರೆ ಕಾಯ್ತಾ ಇದ್ದೇನೆ ಇಂದು ಕೂಡ

ಬರಬಹುದೆಂದು ಸಂದೇಶ ಅತ್ತ ಕಡೆಯಿಂದ!!!)

:)