ನೆರೆ ಪರಿಹಾರದ ಕೆಲಸಕ್ಕೆ ಖರ್ಚಾಗಲಿವೆ ಸಾವಿರಾರು ಕೋಟಿ ರೂಪಾಯಿಗಳು
ಅದಕ್ಕೇ ಮನದಲ್ಲಿ ಮಂತ್ರಿಯಾಗುವಾಸೆ ತುಂಬಿಕೊಂಡಿವೆ ಬೀದಿಯ ನಾಯಿಗಳು
ಅಲ್ಲಿನ ಸಾವಿರ ಸಾವಿರದಲ್ಲಿ ಒಂದೆರಡು ತಮ್ಮ ಕಿಸೆಗೆ ಸೇರಿಸಿಕೊಂಡರೂ ಸಾಕು
ಮುಂದಿನ ಐದಾರು ತಲೆಮಾರೂ ನಿಶ್ಚಿಂತೆಯಿಂದ ನಡೆಸಬಹುದು ತಮ್ಮ ಬದುಕು
ಸಭಾಪತಿಯಂತಹ ಗೌರವಾನ್ವಿತ ಹುದ್ದೆಯೂ ಯಾರಿಗೂ ಬೇಡವಾಗಿದೆ ಇಂದು
ಗೌರವ ಬೇಕಿಲ್ಲ ಎಲ್ಲರೂ ಕೇಳುವುದು ದುಡ್ಡು ಮಾಡಲಾಗೋ ಹುದ್ದೆ ಬೇಕೆಂದು
ಜನತೆಗೆ ಸಮೀಪವಾಗಿ ಸ್ಪಂದಿಸಿದಷ್ಟೂ ಕಿಸೆಗೆ ಕಾಸು ಸೇರುತ್ತಾ ಇರುತ್ತದೆ ಸರಾಗ
ಕಾಸು ಮಾಡಿಕೊಂಡರೆ ತಾನೇ ಮಂದಿನ ಚುನಾವಣೆಯಲ್ಲಿ ಗೆಲ್ಲಬಹುದು ನೀವಾಗ
ಶೋಭ ಇದ್ದಿದ್ದರೆ ಕಾಸು ಮಾಡಲಾಗುತ್ತಿರಲಿಲ್ಲ ಎನ್ನುವುದೆಲ್ಲರಾಡುವ ಪಿಸುಮಾತು
ಆದರೆ ಯಡ್ಡಿ ಮಕ್ಕಳೂ ಇದರಲ್ಲಿ ಕಡಿಮೆ ಇಲ್ಲ ಎನ್ನುವುದೀಗ ಬೀದಿ ಬೀದಿ ಮಾತು
ದೇವರಾಣೆ ಹಾಕಿ ಮತ್ತೆ ಮಗನನ್ನು ಸಂಸದನನ್ನಾಗಿಸಿದ ಯಡ್ಡಿಯ ಆ ಮಹಾ ತಪ್ಪು
ಸಾರ್ವಜನಿಕವಾಗಿ ಕಣ್ಣೀರಿಳಿಸುವಂತೆ ಮಾಡಿತೀಗ ಮೋರೆಗೆ ಬಳಿದಂತೆ ಮಸಿ ಕಪ್ಪು
*********************************************
ಪ್ರತಿಕ್ರಿಯೆ (1)