http://sampada.net/blog/sathvik-n-v/10/11/2009/22462
ಸಾತ್ವಿಕರ ಮೇಲಿನ ಕುರಿತಾದ ಚರ್ಚೆಯ ಮುಂದಿನ ಭಾಗ ಅಂದು ಕೊಂಡಿದ್ದೇನೆ. ನನಗಿಲ್ಲಿ ಒಬ್ಬ ಸಾಮಾನ್ಯ ಒಬ್ಬ ಗಣಕಯಂತ್ರದ ಉಪಯೋಗಕನಾಗಿ ನನ್ನ ಸಮಸ್ಯೆಯನ್ನು ನಿಮ್ಮ ಮುಂದೆ ಇಟ್ಟಿದ್ದೇನೆ. ನಾನು ಮತ್ತು ನನ್ನಂತಹ ಹಲವಾರು ಗ್ರಾಮೀಣ ಭಾಗದಿಂದ ಬಂದತಹ ಯುವಕರಿಗೆ (ನಾವೇಷ್ಟೆ ಮುಂದುವರಿದ್ದಿದೇವೆಂದು ಅಂದುಕೊಂಡರು) ಸ್ವತಃ ಗಣಕ ಯಂತ್ರವನ್ನು ಕೊಳ್ಳುವಂತಹುದು ಮತ್ತು ಗಣಕಯಂತ್ರದಲ್ಲಿ ಕನ್ನಡ ಬಳಸುವಂತದ್ದು ಬಹಳ ಕಷ್ಟ. ಹೀಗಾಗಿ ನಾವು ಮೊರೆ ಹೋಗುವುದು ನಮ್ಮ ಬರಹಗಳನ್ನು ಅಚ್ಚಿಸಲು ಕಂಡುಕೊಂಡ ದಾರಿ ಗಣಕಯಂತ್ರ ಕೇಂದ್ರಗಳು. ಇಲ್ಲಿ ಬೇರೆ ಬೇರೆ ಕೇಂದ್ರಗಳು ತಾವಿಷ್ಟಪಟ್ಟ ತತ್ರಾಂಶಗಳಲ್ಲಿ ಬರಹಗಳನ್ನು ಟೈಪಿಸಿ ಕೊಡುತ್ತಾರೆ. ಇಲ್ಲಿಯವರೆಗೆ ಏನು ಸಮಸ್ಯೆ ಇಲ್ಲ. ಸಮಸ್ಯೆ ಆರಂಭವಾಗುವುದು ಇಲ್ಲಿಯ ನಂತರ. ಮುದ್ರಿಸಿದ ಬರಹದ ಜೊತೆಗೆ ಮ್ರದು ಬರಹವನ್ನು ಪಡಕೊಂಡ ನಮಗೆ ಇನ್ನೊಂದು ಬಾರಿ ಅದನ್ನು ಮುದ್ರಿಸ ಹೊರಟಾಗ ಬಹಳ ಸಮಸ್ಯೆಗಳನ್ನೆದುರಿಸಬೇಕಾಗುತ್ತದೆ. ಹೊರ ರಾಜ್ಯಗಳಲ್ಲಂತು ನಮ್ಮ ಪಾಡು ನಾಯಿ ಪಾಡು ಸ್ವಾಮಿ. ನಮ್ಮಂತಹ ಗಣಕಯಂತ್ರ ನಿಪುಣರಲ್ಲದವಿರಿಗೆ ಕನ್ವೆರ್ಟರ್ಗಳು ಉಪಯೋಗವಿಲ್ಲ.
ಹಾಗಾಗಿ ನಮ್ಮ ಮಿತ್ರರಿಗೆ ನನ್ನ ಪ್ರಶ್ನೆಯೆನೆಂದರೆ, ನಮಗೆ ಯಾವ ಫ಼ಾಂಟಲ್ಲಿ ಬರೆದರೂ ಯಾವುದೆ ಗಣಕಯಂತ್ರದಲ್ಲಿ ಓದಿ ಮುದ್ರಿಸುವ ರೀತಿಯಲ್ಲಿ ಒಂದು ಕನ್ನಡ ತತ್ರಾಂಶ ಬರೆಯಲು ಸಾದ್ಯವೆ?
ಧನ್ಯವಾದಗಳು
ಸಂದೀಪ ಕುಮಾರ ಶೆಟ್ಟಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!