ಸಂಸಾರವನು ತೊರೆದು ಸಾಧಿಸುವ ಆ ಹೆಣ್ಣು
ಸಾಧಿಸುವುದಾದರು ಏನು ಅದು ಬರೀ ಮಣ್ಣು

ಸಂಸಾರವನು ತೊರೆದು ಸಾಧಿಸುವ ಆ ಗಂಡ
ಸಾಧಿಸದೇ ಇರುವುದಿಲ್ಲ ಆಗಿದ್ದರೂ ತಾ ಭಂಡ

ಸಾಧನೆ -ಸಂಸಾರ ನಡುವೇನಿದೆ ಸಂಬಂಧ ಹೇಳಿ
ತಾ ಎಲ್ಲಿದ್ದರೂ ಸಾಧನೆ ಸಾಧ್ಯ ಇದ ನೀವು ಕೇಳಿ

ಸಾಧನೆಗೆ ಮನದೊಳಗೆ ಸಾಧಿಸುವ ಕಿಚ್ಚು ಬೇಕು
ವಾತಾವರಣವನು ಪೂರಕವಾಗಿಸೋ ಛಲ ಬೇಕು

ಮಾರಕ ವಾತಾವರಣವ ಪೂರಕವಾಗಿಸಿ ನೋಡಿ
ಅದನೆ ಸಾಧನೆಯ ಪ್ರಥಮ ಮೆಟ್ಟಲಾಗಿಸಿ ನೋಡಿ

ಅದ ಇದ ಬಿಟ್ಟು ಎಲ್ಲೋ ಏನೋ ಸಾಧಿಸುವರು
ಮಹತ್ಸಾಧನೆಯೆಂದು ತನ್ನ ಬೆನ್ನ ತಟ್ಟಿಕೊಂಬರು

ಸದ್ಗೃಹಿಣಿ ಗ್ರಹಸ್ತರಿಗೆ ಸಂಸಾರವೇ ಸಾಧನಾ ಕ್ಷೇತ್ರ
ಇಲ್ಲಿ ಸೋತನ್ಯ ಸಾಧಿಸಿದರದು ತೊರಿಕೆಗೆ ಮಾತ್ರ

ಜನರು ನಿಮ್ಮ ಹೊಗಳಿ ಸಂದರ್ಶನ ಮಾಡಿದರೆ ಸಾಕೆ
ಮತ್ತೀ ಸಂಸಾರವೆಂಬ ಜಂಜಾಟ ಇಲ್ಲಿ ಇರಬೇಕು ಏಕೆ

ಲೋಕರೂಢಿಯಲಿ ಏನಿದೆಯೋ ಅದನು ಸಾಧಿಸು ನಿತ್ಯ
ತನ್ನವರ ಜೊತೆ ಜೊತೆಗೆ ಇದ್ದು ಸಾಧಿಸಿದರೆ ಅದು ಸತ್ಯ
***************************