ಸಿಹಿ ಇರದ ಜೇನು ನೀನು, ಸವಿ ಇರದ ಹಣ್ಣು ನೀನು
ಮಳೆ ಇರದ ಮೋಡ ನೀನು, ಕಣ್ಣಿರದ ಅಂದ ನೀನು
ಭಾವವಿರದ ಮಾತು ನೀನು ,ಒಲವಿರದ ಮನಸು ನೀನು
ಕಲ್ಲಿಗೂ ಹೋಲಿಸಲು ಮನ ಬಾರದು ಇನ್ನೂ
ಜೀವವಿರದ ಶಿಲ್ಪ ನೀನು, ಮಾತಾಡದ ಗೊಂಬೆ ನೀನು
ಗೊಂಬೆಯನ್ನು ನಂಬಿ ಕೆಟ್ಟು ಹೋದೆ ನಾನು
ಪ್ರೀತಿ ಇರದ ಹಾಡು ನಿನದು ,ಹಾಡಿನಲ್ಲಿ ಅರ್ಥವಿರದು
ನಿನ್ನ ಹಾಡಿಗೆ ನನ್ನ ತಾಳ ವ್ಯರ್ಥವದು
ನಿನ್ನ ರೀತಿ ನೀತಿ ನೋಡಿ ,ಇದುವೆ ಪ್ರೀತಿ ಎಂದು ಸಾರಿ
ಬಂದೆ ನಾನು ಎಲ್ಲರ ದೂರ ಮಾಡಿ
ಮುಗ್ಧೆಯಂತೆ ನಟಿಸಿ ನೀನು ,ತೆಗೆದೆ ನನ್ನ ಪ್ರಾಣವನ್ನು
ದೂರದಲ್ಲೇ ನಿಂತು ಹಾರಿ ಹೋದೆ ಹೇಳದೆ ಒಂದು ಮಾತನ್ನು
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
(ಸಂಪದದ ಎಲ್ಲಾರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು)
ಮೂರ್ತಿ ಪೂಜೆ ಬೇಕೆ ಬೇಡವೇ?
ಭಾರತದಲ್ಲಿ ಕ್ರಿಸ್ತ ಶಕದ ಬಳಕೆಯೇ ಏಕೆ ಮತ್ತು ಹೇಗೆ ಬಂದಿತು
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (1)