"ಸಖೀ,
ನನ್ನೀ ತಲೆಯಲ್ಲೀಗ ನೂರೆಂಟು ಸಮಸ್ಯೆಗಳ ಸಂತೆ
ನನಗೋ ವಾರದಿಂದ ಏನೂ ಬರೆದಿಲ್ಲವೆಂಬ ಚಿಂತೆ"
"ಹೀಗೆಯೇ ಬರೆದು ಬಿಡು ನೂರೆಂಟು ಸಮಸ್ಯೆಗಳ ಸಂತೆ
ಅದರಿಂದಾಗಿ ನಿನಗೀಗ ಏನೂ ಬರೆದಿಲ್ಲ ಎಂಬಾ ಚಿಂತೆ"
"ನೋಡೀಗ ತಯಾರಾಗುತ್ತದೆ ಕವನ ಓದಿ ಹೇಳುವಿಯಂತೆ"
"ನೀನು ಬರೆದರೆ ಓದಲು ತಯಾರಾಗಿ ನಾ ಕೂತಿರುವೆನಂತೆ"
"ನೀನೆನ್ನ ಜೊತೆಗಿದ್ದು ನನ್ನ ಮೆದುಳ ಹೀಗೆ ಚಿವುಟುತಿರಲು
ಹರಿದು ಬರಬಹುದು ಸರಾಗವಾಗಿ ಇಲ್ಲಿ ಪದಪುಂಜಗಳು"
"ಗೊತ್ತಾಯಿತು ಗೊತ್ತಾಯಿತೆಂದೀ ಸಖಿಯು ಹೇಳುತಿಹಳು
ನಿನ್ನೀ ಹೊಸ ಕವನದ ನಿರೀಕ್ಷೆಯಲಿಲ್ಲಿ ಕಾದು ಕೂತಿಹಳು"
"ದಿನವೂ ಒಂದೆರಡು ಮಾತ ನೀ ಆಡಿದರೆ ಎನ್ನೊಡನೆ ಸಖಿ
ನಂಬು ನನ್ನ ನಿಜಕೂ ನನಗಿಂತ ಜಗದಲ್ಲಿ ಇನ್ನಾರಿಲ್ಲ ಸುಖಿ"
" :) "
"ನಕ್ಕು ಚಂದಿರನಂತೆ ಸುಮ್ಮನಿರಬೇಡ ಆಡು ಎರಡು ಮಾತ
ಚಂದಿರ ಮಾತಾಡ ಏಕೆಂದರೆ ಮಾತು ಬರದ ಮೂಕನಾತ"
" :)"
"ಈ ಸಾಲುಗಳನ್ನೇ ಎತ್ತಿ ಹಾಕಿ ಬಿಡ್ತೇನೆ ನಾನೆನ್ನ ಬ್ಲಾಗಿನಲ್ಲಿ"
"ಜನರೆಲ್ಲಾ ಓದಿ ಪ್ರತಿಕ್ರಿಯಿಸಲಿ ಖುಷಿಪಡುತ್ತಿರೋಣ ನಾವಿಲ್ಲಿ!!!"
********************************
ಪ್ರತಿಕ್ರಿಯೆ (2)