ಎಯ್ ಕುಮಾರ್... ಇವತ್ತು ಒಂಬತ್ತು ಗಂಟೆ ಆದ್ರೂ ಯಾಕಿನ್ನೂ ಸೂರ್ಯನ ಬೆಳಕು ಭೂಮಿಗೆ ಬರದೆ ಮೊಡ ಮುಚ್ಚಿದೆ ಗೊತ್ತಾ.

ನನ್ನ ಗು ಲಾಭಿ ಇನ್ನೂ ನಿದ್ದೆಯಿಂದ ಎದ್ದಿಲ್ಲ, ಅವಳ ಕಣ್ಣು ರೆಪ್ಪೆ ಹ್ಯಾಗೆ ನಿಧಾನವಾಗಿ ತೆರೆಯುತ್ತೊ ಹಾಗೆ, ಸೂರ್ಯನ ಕಿರಣ ನಿಧಾನವಾಗಿ ಬಂದು ಈ ಭೂಮಿನ ಚುಂಬಿಸುತ್ತೆ, ಅವಳು ಹಾಸಿಗೆ ಬಿಟ್ಟು ಬಂದ್ರೆ ಪ್ರಾಣಿ ಪಕ್ಷಿಗಳೆಲ್ಲಾ ತನ್ನ ದಿನಚರಿ ಆರಂಭಿಸುತ್ತೆ.

ಅವಳು ನಕ್ಕರೆ ಎಲ್ಲಾ ಜಾತಿಯ ಹೂವಿನ ಮೊಗ್ಗು ಅರಳುತ್ತೆ, ಅವಳ ಪಾದ ಸೊಕಿದರೆ ಈ ಗಿರಿಶಿಕರಗಳ ಮೇಲೆ ಹಳದಿ ಮಿಶ್ರಿತ ಹುಲ್ಲುಗಳು ಚಿಗುರುತ್ತೆ. ಈ ಹುಲ್ಲಿಗೂ, ಮೊಗ್ಗಿಗೂ, ಗಿಡ, ಮರ, ಪ್ರಾಣಿ, ಪಕ್ಷಿಗಳಿಗೂ ಅವಳ ಜೊತೆ ಸಂತೋಷನ ಹಂಚಿಕೊಳ್ಳೊ ಸಂಭ್ರಮ.

ಸೂರ್ಯ ಯಾಕೆ ಮುಳೂಗ್ತೊ ಅಂತ ಸಂಕಟ, ಸೂರ್ಯನಿಗು ಕೂಡ ನನ್ನನ್ನು ನಸುಕಿನಲ್ಲಿ ಮರೆಯಾಗುತ್ತಿದ್ದೆನಲ್ಲ ಅನ್ನೊ ನೋವು. ಇವಳು ಗಂಧರ್ವ ಕನ್ಯೆಯೋ..... ದೇವ ಕನ್ಯೆಯೋ..... ನನಗೆ ಅರ್ಥವಾಗಿಲ್ಲ ಕಣೋ. ಅಂತ ಅಪೂರ್ವ ಮಾಯೆ ಈ ಚಕೋರನ ಮನಸ್ಸಿಗೆ ಮಲ್ಲಿಗೆ ಮುಡಿಸಿದಳೆಂದರೆ ಯಾವುದೊ ಜನ್ಮದ ಪುಣ್ಯ.

ನನ್ನ ತಾಯಿ ನನಗೆ ಹೇಲ್ತಾ ಇದ್ಲು, ಪ್ರೀತಿ ಹ್ಯಾಗೆ ಬೇಕಾದ್ರೂ ಬರಬಹುದು, ಯಾವಗ್ಬೇಕಾದರೂ ಬರಬಹುದು, ಯಾರಿಂದ ಬೇಕಾದರು ಬರಬಹುದು, ಆದರೆ ಗುಲಾಭಿ ರೂಪದಲ್ಲಿ ಬಂದು ನನ್ನನ್ನು ಆವರಿಸಿಕೊಂಡಿರೋ, ಆ ಪ್ರೇಮದ ದೇವೆತೆನೆ ನಾನು ಹ್ಯಾಗೆ ಹೊಗಳ್ಳಿ.... ಹ್ಯಾಗೆ ವರ್ಣಿಸಲಿ....