ನಸುನಗೆ ತುಸುಲಜ್ಜೆ  ಜೊತೆಗಿನಿತು ದಿಗಿಲು
ತಿರುಗಿಸಿದ ಮೊಗ ಮತ್ತೆ ಅರಗಣ್ಣ ನೋಟಗಳು
ಮಚ್ಚರದ ಮಾತುಗಳು ಜಗಳಗಳು ಬೆಡಗುಗಳು
ಪರಿಪರಿಯ ಬಗೆಯಲ್ಲಿ ಸಂಕಲೆಯೇ ಹೆಣ್ಣುಗಳು!

ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರ ಶತಕದಿಂದ):

ಸ್ಮಿತೇನ ಭಾವೇನ ಚ ಲಜ್ಜಯಾ ಭಯಾ
ಪರಾಙ್ಮುಖೈರರ್ಧ ಕಟಾಕ್ಷ ವೀಕ್ಷಣೈಃ |
ವಚೋಭಿರೀರ್ಷ್ಯಾ ಕಲಹೇನ ಲೀಲಯಾ
ಸಮಸ್ತ ಭಾವೈಃ ಖಲು ಬಂಧನಂ ಸ್ತ್ರೀಯಃ ||

-ಹಂಸಾನಂದಿ

ಕೊ: ಇದು ಶೃಂಗಾರ ಶತಕದ ಎರಡನೇ ಪದ್ಯ.  ಆಸಕ್ತರಿಗೆ ___LINK_OPEN_href="http://hamsanada.blogspot.com/2008/10/blog-post_22.html"___ಶೃಂಗಾರ ಶತಕದ ಮೊದಲ ಪದ್ಯದ ಅನುವಾದ ಇಲ್ಲಿದೆ ಮತ್ತೆ ___LINK_OPEN_href="http://hamsanada.blogspot.com/2010/03/blog-post_11.html"___ಮೂರನೆ ಪದ್ಯದ ಅನುವಾದ ಇಲ್ಲಿದೆ.

ಕೊ.ಕೊ: ಯೋಗರಾಜ ಭಟ್ಟರಿಗೂ ಈ ಅನುವಾದಕ್ಕೂ ಯಾವುದೂ ಸಂಬಂಧವಿಲ್ಲ ಅನ್ನೋದನ್ನ ಒಮ್ಮೆ ಸ್ಪಷ್ಟ ಪಡಿಸಿಬಿಡುತ್ತೇನೆ !