ಯಡ್ಡಿ ಸರಕಾರದ ಶೋಭೆ ಸದ್ಯವೇ ಮರಳಿ ಬರಲಿದೆಯಂತೆ

ಯಡ್ಡಿ ಮುಖದಲ್ಲೂ ಹಿಂದೆ ಇರದಿದ್ದ ಆ ನಗೆ ಕಾಣಬಹುದಂತೆ

 

ನಿತಿನ್ ಗಡ್ಕರಿ ದೆಹಲಿಯಲಿ ನೀಡಿದ್ದಾರಂತೆ ಈ ಆಶ್ವಾಸನೆ

ಇಲ್ಲಿ ಕೆಲವರ ಮುಖ ಗಂಟಾಯ್ತು ಬಂದಿದ್ದರಿಂದದರ ವಾಸನೆ

 

ಸ್ತ್ರೀ ಶಾಪದಿಂದ ವಿಮುಕ್ತಿ ಪಡೆಯಬಹುದೇ ಈ ನಮ್ಮ ಸರ್ಕಾರ

೨೦೧೦ ರ ಗಡಿದಾಟಲು ಬಿಟ್ಟೀತೇ ಅದನು ಅದರ ಆ ಗ್ರಹಚಾರ

 

ಕೋಡೀ ಮಠದ ಸ್ವಾಮಿ ಮೊನ್ನೆ ಮತ್ತೆ ನುಡಿಯಿತಂತೆ ಭವಿಷ್ಯ

ಬಿಡಿಸಲಾಗದ ಕಗ್ಗಂಟು ಯಡ್ಡಿಗಿದೆ ಎಂದು ಸಾರಿದೆ ಆ ಮನುಷ್ಯ

 

ಭವಿಷ್ಯ ಹೇಗಿದ್ದರೂ ಸರಿಯೇ ಅಡ್ಡಿಯೇ ಇಲ್ಲವಂತೆ ಈ ಯಡ್ಡಿಗೆ

ಶೋಭ ಮಂತ್ರಿಯಾಗಲೊಮ್ಮೆ ಮತ್ತಾಗಲಿ ಏನಾದರೂ ಆಚೆಗೆ

 

ಮಾಡಿದ ಪಾಪ ಪರಿಹಾರ ಆದರೆ ಸಾಕು ಅಲ್ಲಿಗೆ ಮನಶ್ಯಾಂತಿ

ನಾಡಿನ ಸಮಸ್ಯೆ ಹೇಗಿದ್ದರೇನು ಮನೆಯಲ್ಲಿರಲಿ ಸುಖ ಶಾಂತಿ

**********************************

 

- ಆಸು ಹೆಗ್ಡೆ