ತನ್ನ ದೀರ್ಘ ಪಯಣದ ಕೊನೆ ಕಂಡರು ಜ್ಯೊತಿ ಬಸು

ಮಾರ್ಗದರ್ಶಕರಿಲ್ಲದಂತೆ ಈಗ ಎಡಪಂಥೀಯರ ಬಸ್ಸು

 

ಆ ಜ್ಯೊತಿ ಬಸುವಿಗೆ ಕನ್ನಡಿಗರೆಲ್ಲರೂ ಸದಾ ಋಣಿಗಳು

ಆತನೇ ಆಗಿದ್ದಿದ್ದರೆ ಗೌಡರಾಗುತ್ತಿರಲಿಲ್ಲ ಪ್ರಧಾನಿಗಳು

 

ನಿನ್ನೆ ಆ ಸಾವಿನ ಸುದ್ದಿಯ ಓದಿ, ಕೇಳಿ, ಮಲಗಿ ಎದ್ದು

ಬೆಳಗಾಗುವಾಗ ಊರೆಲ್ಲಾ ಇನ್ನೊಂದು ಸಾವಿನ ಸದ್ದು

 

ತನ್ನ ಶಿಷ್ಯ ರಾಮಾಚಾರಿಯ ಹಿಂಬಾಲಿಸಿ ನಡೆದೇ ಬಿಟ್ರು

ನಶ್ವರರು ಎಲ್ಲರೆಂದು ಬೋಧಿಸಿ ಹೋದರು ನಮ್ಮೀ ಮೇಷ್ಟ್ರು

 

ಗಾನಲೋಕದಲ್ಲೊಬ್ಬ ಅಶ್ವತ್ಥ ನಟನೆಯಲ್ಲೊಬ್ಬನೇ ಅಶ್ವತ್ಥ

ಇಬ್ಬರನೂ ಕಳೆದುಕೊಂಡೀಗ ಆ ಲೋಕಗಳೆರಡೂ ಅಸ್ವಸ್ಥ

 

ಮೂರೇ ವಾರಗಳಲ್ಲಿ ಅಗಲಿದ ನಾಲ್ವರೂ ಮಹಾ ಸಾಧಕರು

ಸದ್ಯಕ್ಕೆ ಅವರ ಸ್ಥಾನಗಳನು ತುಂಬಲು ಇನ್ನಾರೂ ಬಾರರು!!!

********************************

 

-ಆಸು ಹೆಗ್ಡೆ